ಚಿಲುಮೆ ತಾಣದಲ್ಲಿ ಕೃತಿಗಳನ್ನು ಪ್ರಕಟಿಸುವ ಕೆಲಸಕ್ಕೆ ಸ್ವಯಂಸೇವಕರು ಅನುಸರಿಸಬೇಕಾದ ಕ್ರಮಕ್ಕೆ ಮಾರ್ಗದರ್ಶನವನ್ನು ಕೊಡಲು ಈ ಸೂಚಿಗಳನ್ನು ತಯಾರಿಸಲಾಗಿದೆ.
೧.
ಪ್ರಕಟಿತ ಕೃತಿಗಳನ್ನು ಚಿಲುಮೆ ತಾಣದಲ್ಲಿ ಮರು ಪ್ರಕಟಣೆಗೆ ಅನುಮತಿ ಪಡೆಯಲು ನಮ್ಮ
ತಾಣದ ಉದ್ದೇಶ ಮತ್ತು ಕಾರ್ಯವನ್ನು ವಿವರಿಸಿ ಲೇಖಕರ ಮನ ಒಲಿಸುವುದು.
೨.ಅನುಮತಿ ದೊರೆತ ಕೃತಿಗಳ ಪ್ರತಿಯನ್ನು ಅ) ಮನವಿ ಮಾಡಿ ಲೇಖಕರಿಂದಲೇ ಪಡೆಯುವುದು ಆ)ಗ್ರಂಥಾಲಯಗಳಿಂದ ಎರವು ತರುವುದು ಇ)ಖರೀದಿಮಾಡುವುದು.
೩.ಪ್ರತಿಗಳಿಂದ
ಪಠ್ಯ (ಯುನಿಕೋಡ್/ನುಡಿ/ಬರಹ) ಕ್ರಮಕ್ಕೆ ತರುವುದು. ಅ) ವೇಗವಾಗಿ/ನೇರವಾಗಿ
ಕೀಲಿಕರಿಸಲು ಪರಿಣಿತಿ ಇದ್ದರೆ ಆ ಮಾರ್ಗವನ್ನು ಅನುಸರಿಸಬಹುದು.ಆ)ಕಂಪ್ಯೂಟರ್‌ನಲ್ಲಿ
ಪರಿಣಿತರಾಗಿದ್ದು ಹಾರ್ಡ್‌ವೇರ್/ಸಾಫ್ಟ್‌ವೇರ್‌ಗಳ ಅನುಕೂಲತೆಯಿದ್ದರೆ ಸ್ಕ್ಯಾನಿಂಗ್
ಮತ್ತು ಓ.ಸಿ.ಆರ್ ಮತ್ತು ಕರಡು ತಿದ್ದಿ ತಯಾರುಮಾಡಬಹುದು.
ಇದನ್ನು ಮಾಡಲು ಈಗಾಗಲೇ ಗೊತ್ತಿರುವ ರೀತಿ ಈ ರೀತಿ ಇದೆ..
ಅ)
ಎರಡು ಪುಟಗಳು (ಪುಸ್ತಕ ತೆರೆದಂತೆ) ಬರುವಂತೆ ಪ್ರತಿ ಸ್ಕ್ಯಾನ್‌ಕಡತವನ್ನು ಒಂದೊಂದಾಗಿ
ಮಾಡಿ ಅಷ್ಟೂ ಪುಸ್ತಕದ ಸಮೂಹವನ್ನು ಒಂದು ಫೋಲ್ಡರ್‌ನಲ್ಲಿ ಇರಿಸಿಕೊಳ್ಳಬೇಕು.
ಆ)
‘scan tailor’ ಎಂಬ ಉಚಿತ ತತ್ರಾಂಶವು ಎರಡು ಪುಟವನ್ನು ಒಡೆದು ಒಂದೊಂದು ಪುಟಗಳಾಗಿ
ಮಾಡಿ ಮತ್ತೆ ಅವನ್ನು ನೆಟ್ಟಗೆ ತಿರುಗಿಸಿ, ಬೇಡದ ಕರಿ ಅಂಚುಗಳನ್ನು ತೆಗೆದು
ಅಚ್ಚುಕಟ್ಟು ಮಾಡಿಕೊಡುತ್ತದೆ.
ಆ)ಓ.ಸಿ.ಆರ್. ಮಾಡಲು ಈಗ ಗೂಗಲ್ ಡ್ರೈವ್
ಉಪಯೊಗಿಸಬೇಕು. ಗೂಗಲ್ ಡ್ರೈವ್ tiff ಪುಟಗಳನ್ನು ಸಂಸ್ಕರಿಸುವುದಿಲ್ಲವಾದ್ದರಿಂದ,
scan tailor tiff ಪುಟಗಳನ್ನು ಹೊರಹಾಕುವುದರಿಂದ ಇಲ್ಲಿ ಸ್ವಲ್ಪ ಹೆಚ್ಚಿನ
ಕೆಲಸವಿದೆ.i) scan tailor ಉತ್ಪನ್ನವನ್ನು PDF PNG Jpeg ಅಗಿ
ಮಾರ್ಪಡಿಸಿಕೊಳ್ಳಬೇಕು. ಇದಕ್ಕೆ ಗೂಗಲ್ ಡ್ರೈವ್‌ನಲ್ಲು ಸೌಲಭ್ಯವಿದೆ ಅಥವಾ
ಅನುಕೂಲವಿರುವ /ಪರಿಚಯವಿರುವ ಮಾರ್ಗವನ್ನು ಅನುಸರಿಸಬೇಕು. ಇಲ್ಲಿ ಇನ್ನೊಂದು ವಿಷಯ
ಮುಖ್ಯವಾಗುತ್ತದೆ: ಗೂಗಲ್ ಡ್ರೈವ್ ಒಂದೊಂದು ಕಂತಿಲ್ಲೂ ೧೦ ಪುಟಗಳಿಗೆ ಮೀರದಷ್ಟನ್ನು
ಮಾತ್ರ ಒ.ಸಿ.ಆರ್. ಮಾಡುತ್ತದೆ-ಆದ್ದರಿಂದ ಗೂಗಲ್ ಡ್ರೈವ್ ಗೆ ಸಣ್ಣ ಕಡತಗಳಾಗಿ ಒಡೆದು
ಅಪ್‌ಲೋಡ್ ಮಾಡಬೇಕು.ii) ಗೂಗಲ್ ಡ್ರೈವ್ನಲ್ಲಿ ನಾವು ಆ ಕಡತವನ್ನು ರೈಟ್ ಕ್ಲಿಕ್
ಮಾಡಿ open with “google docs” ಆಯ್ದುಕೊಂಡರೆ ಅದೇ ಗೂಗಲ್ ಡ್ರೈವ್ನಲ್ಲೇ ಓ.ಸಿ.ಆರ್
ಆದ ಪುಟ ಮೂಡುತ್ತದೆ. ಈಗ ಸಧ್ಯಕ್ಕೆ ಓ.ಸಿ.ಆರ್ ಆದ ಪುಟದಲ್ಲಿ ಕೆಲವು ಕಡೆ ತೆಲುಗು
ಅಕ್ಷರಗಳು ಬರುತ್ತಿವೆ. ಅದು ಮುಂದೆ ಗೂಗಲ್‌ನವರು ಸರಿಪಡಿಸಬಹುದು.
ಇ).
ವ್ಯಾಕರಣ ದೋಷಗಳನ್ನು ತಿದ್ದಿಕೊಳ್ಳುವ ವಿಷಯ: ಗೂಗಲ್ ಡ್ರೈವ್ ನಿಂದ ನಿಮ್ಮ
ಕಂಪ್ಯೂಟರ್‌ನ ಬೇರೆಲ್ಲಾದರೂ copy+paste ಮಾಡಿಕೊಂದು ವ್ಯಾಕರಣ ದೋಷಗಳನ್ನು
ತಿದ್ದಿಕೊಳ್ಳಬೇಕು. ವ್ಯಾಕರಣ ದೋಷ ತಿದ್ದಪಡಿಗೆ notepad++ ಎಂಬ ಉಚಿತ ತತ್ರಾಂಶ ಬಹಳ
ಉಪಯೋಗಕಾರಿ. ಅದರಲ್ಲಿ ಕಡತಗಳ ಸಮೂಹದಲ್ಲಿರುವ ತಪ್ಪುಗಳನ್ನು ಸಾರಾಸಗಟಾಗಿ ತಿದ್ದಬಹುದು.
ಮತ್ತು ಯುನಿಕೋಡ್ ಗಳಲ್ಲಿ ಒಂದೊಂದೇ ಭಾಗವನ್ನು ಅಳಿಸಿ ಬೇರೆ ಲಿಪ್ಯಂಶವನ್ನು
ಸೇರಿಸಬಹುದು. ಶ್ರಮ ಮತ್ತು ಸಮಯ ಉಳಿಯುತ್ತದೆ. Spell-check ಉಪತತ್ರಾಂಶ
ಅಳವಡಿಸಿಕೊಂಡರೆ ಇನ್ನೂ ಕೆಲಸ ಸುಗಮವಾ
No comments:
Post a Comment