Showing posts with label ಕೆಲಸ ಮಾಡಿದರೆ ಸುಸ್ತು ಸುತ್ತೋಕೆ ಸುಸ್ತು ಇಲ್ಲ. Show all posts
Showing posts with label ಕೆಲಸ ಮಾಡಿದರೆ ಸುಸ್ತು ಸುತ್ತೋಕೆ ಸುಸ್ತು ಇಲ್ಲ. Show all posts

Monday, July 27, 2009

೪ ದಿನಗಳ ಕೆಲಸದ ವಾರ!

ಇತ್ತೀಚಿನ ಸುದ್ದಿ ಪ್ರಕಾರ ಶುಕ್ರವಾರವನ್ನೂ ರಜ ಕೊಟ್ಟು ಪರಿಸರ ಮಾಲಿನ್ಯ ಕಡಿಮೆ ಮಾಡಲು ಅಮೇರಿಕನ್ನರು ಯೋಚಿಸಿದ್ದಾರಂತೆ.
ಇದನ್ನು ನನ್ನ ಹೆಂಡತಿಗೆ ಹೇಳಿದಾಗ ಅವರು ಪ್ರತಿಕ್ರಿಯಿಸಿದ್ದೇನೆಂದರೆ : "ಅದೆಲ್ಲ ಭ್ರಾಂತು, ಎಲ್ಲಿ ಜನಗಳು ಮನೆಯಲ್ಲಿ ಕುಳಿತಿರುತ್ತಾರೆ, ತಿರುಗಕ್ಕೆ ಕಾರು ತೆಗೆದುಕೊಂಡು ಹೊರಡುತ್ತಾರೆ, ಪರಿಸರ ಮಾಲಿನ್ಯ ಎಲ್ಲಿಂದ ಕಡಿಮೆಯಾಗಬೇಕು?"
"ದಿನಕ್ಕೆ ಹತ್ತು ಘಂಟೆ ಕೆಲಸ ಮಾಡಿದರೆ ಸುಸ್ತು ಆಗಿರತ್ತೆ. ಹೊರಗಡೆ ಸುತ್ತಲು ಕೈಲಿ ಆಗೊಲ್ಲ" ಅಂದೆ.
"ತಲೆ ಮತ್ತು ಮೈ ಎರಡಕ್ಕೂ ಸುಸ್ತು ಆಗಿರೋದ್ರಿಂದ ಹೊರಟೇ ಹೊರಡ್ತಾರೆ, ನೋಡಿ" ಅಂದರು.
ಇದೆಲ್ಲಾ ೪ ದಿನಗಳ ಕೆಲಸದ ವಾರ ಯೋಚಿಸಿದವರ ತಲೆಗೆ ಏಕೆ ಹೊಳೆಯಲಿಲ್ಲ ಅಂತ!