ನೆನ್ನೆ ವರಮಹಾಲಕ್ಶ್ನಿ ವ್ರತ. ಜನರು ಹಬ್ಬಕ್ಕೆ ಹೂವು ಹಣ್ಣು ತರಕಾರಿಗಳನ್ನು ಕೊಳ್ಳಲು ಮಾರುಕಟ್ಟೆಗೆ ದಂಡೆತ್ತಿದ್ದರು. ಕಟ್ಟಿದ ಮಲ್ಲಿಗೆ ಹೂವಿನ ಬೆಲೆ ಮೊಳಕ್ಕೆ ೩೫ ರುಪಾಯಿ. ಮುಕ್ಕಾಲು ಪಾಲು ಜನ ಚೌಕಾಶಿ ಮಾಡದೆಯೇ ಕೊಂಡುಕೊಂಡರು. ಇವತ್ತು ಅದೇ ಕಟ್ಟಿದ ಮಲ್ಲಿಗೆ ಹೂವಿನ ಬೆಲೆ ಮೊಳಕ್ಕೆ ೫ ರುಪಾಯಿ. ನಮ್ಮ ಮನೆಗೆ ಕೆಲಸಕ್ಕೆ ಹಿಂದೊಮ್ಮೆ ಬರುತ್ತಿದ್ದ ಆಕೆ, ಹಬ್ಬದ ಹಿಂದಿನ ಮತ್ತು ಹಬ್ಬದ ದಿನ ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದಳು. ಅವಳೇ ಹೇಳಿದ್ದು ಆದಿನಗಳಲ್ಲಿ ಕೃ.ರಾ.ಮಾರುಕಟ್ಟೆ ಬಳಿ ಅಂಗಡಿ ಇಡುತ್ತಾಳಂತೆ. ಸಿಕ್ಕಾಪಟ್ಟೆ ಸಂಪಾದನೆ ಆಗುತ್ತದಂತೆ. ಕೆಲಸಕ್ಕೆ ರಜ ಹಾಕಿದರೇನಂತೆ. ಈಗಿನ ಕಾಲದಲ್ಲಿ ಪಟ್ಟಣಗಳಲ್ಲಿ ಹಬ್ಬದ ಆಚರಣೆಯ ವೈಖರಿಯನ್ನು ಜನ ಮರುಳೋ ಜಾತ್ರೆ ಮರುಳೊ ಅನ್ನಬೇಕಷ್ಟೆ.