Monday, May 25, 2020

ಬೇಡ ಅನ್ನಬೇಡ

ಬೇಡ ಅನ್ನಬೇಡ
ಲೇಖಕ: ಎಮ್‌.ಎನ್‌.ಸತ್ಯನಾರಾಯಾಣರಾವ್‌
(೧೧೮೭, ೩೫ನೇ ಸಿ ಅಡ್ಡರಸ್ತೆ, ೪ನೇ ಟಿ ಬ್ಲಾಕ್‌, ಜಯನಗರ, ಬೆಂಗಳೂರು-೪೧)

ನಾನು ಎಲಿಜಬಲ್‌ ಬ್ಯಾಚುಲರ್‌ ಆಗಿದ್ದಾಗ ಕೆಲಸದಲ್ಲಿದ್ದುದು ನಮ್ಮ ತಂದೆ ತಾಯಿಗಳಿದ್ದ ಊರಿನಲ್ಲಿ ಅಲ್ಲ; ಬೇರೆ ಊರಿನಲ್ಲಿ. ಅಲ್ಲಿ ನನಗೆ ಕೊಠಡಿ ಬಾಡಿಗೆ ಕೊಟ್ಟವರು ಯಾರೋ ಅಲ್ಲ; ಅವರ ಬಂಧು ಒಬ್ಬ ನನ್ನನ್ನು ಬಹು ಕಾಲದ ಪರಿಚಯದ ಮೇಲೆ 'ಇವರು ಸಭ್ಯರು' ಎಂದು ಪ್ರಮಾಣ ಪತ್ರ ಕೊಟ್ಟ ಮೇಲೆ  ಬ್ಯಾಚುಲರ್‌ ಆಗಿದ್ದ ನನಗೆ ಕೊಠಡಿ ಬಾಡಿಗೆ ಕೊಡಲು ಒಪ್ಪಿದ್ದು. ನಾನು ಎಷ್ಟು ಸಭ್ಯನಾಗಿ ಅವರಿಗೆ ಕಂಡೆನೆಂದರೆ, ಅವರ ಮಗಳಿಗೆ ನಾನು ತಕ್ಕ ವರ ಎನ್ನಿಸಿ ಬಿಟ್ಟಿತು. ಇನ್ನೊಂದು ಕಾರಣ ಎಂದರೆ ನಾನು ಇದ್ದ ನೌಕರಿ ನಿಜವಾಗಿಯೂ ಸಣ್ಣದಲ್ಲ. ತಕ್ಕಷ್ಟು ಸಂಬಳ ಮುಂದೆ ಹೆಚ್ಚಿನ ಭಡ್ತಿ ಸಿಗುವ ನಿರೀಕ್ಷೆ ಇತ್ತು. ಅವಿರಿವರನ್ನು ವಿಚಾರಿಸಿ ಅವರಿಗೆ ಖಾತ್ರಿ ಆದಮೇಲೆ ಮಗಳಿಗೆ ತಕ್ಕ ವರ ಎಂದು ತೀರ್ಮಾನಿಸಿದರು. ಅವರು ಜೀವನ ಶೈಲಿ ಆಸ್ತಿ ನಿರ್ವಹಣೆ ಅಷ್ಟೇ. ದೊಡ್ಡ ಕುಳವೇ ಹೌದು. ಈನಪ್ಪಾ ಅಂದರೆ ನೌಕರಿ, ಸಂಬಳ ಇದರ ಪರಿಚಯ ಅವರಿಗೆ ಇರಲಿಲ್ಲ. ಆದರೂ ಬಹಳ ತೊಯ್ದಾಟವಾದಮೇಲೆ ಕಷ್ಟಪಟ್ಟು ಮುಂದುವರಿಯಲು ತೀರ್ಮಾನಿಸಿರು. ಒಂದು ದಿನ ಅಕಸ್ಮಿಕವಾಗಿ ನನ್ನ ಎದುರಾದಾಗ ನನ್ನ ತಮ್ಮ ನಿಮ್ಮ ತಂದೆ ತಾಯಿ ಇರುವ ಊರಿಗೆ ಕೆಲಸದಮೇಲೆ ಹೋಗಲಿದ್ದಾನೆ, ಹಾಗೆಯೇ ನಿಮ್ಮ ಮನೆಗೆ ಹೋಗಿ ಅವರನ್ನು ಭೇಟಿ ಆಗಿ ಯೋಗಕ್ಷೇಮ ವಿಚಾರಿಸಲು ಹೇಳುತ್ತೇನೆ, ಅವರ ಅಡ್ರೆಸ್‌ ಕೊಡಿ ಎಂದರು. ನಾನು ಕೊಟ್ಟೆ, ಕೆಲ ದಿವಸಗಳ ನಂತರ ನಾನು ಊರಿಗೆ ಹೋದಾಗ ನನ್ನ ತಂದೆ ಇವರ ತಮ್ಮ ಬಂದಿದ್ದು ನಮ್ಮ ಆಗು ಹೋಗುಗಳ ಬಗ್ಗೆ ಲೋಕಾಭಿರಾಮವಾಗಿ ಮಾತನಾಡಿದ್ದನ್ನು ಹೇಳಿದರು. ಅಷ್ಟೆ, ಮುಂದಕ್ಕೆ ಅವಳ ಮದುವೆ ವಿಷಯ ಬೇರೆ ತಿರುವು ಪಡೆದಿತ್ತು. ಸಂಬಂಧ ಹುಡುಕಿ ಮದುವೆ ಮಾಡೇಬಿಟ್ಟರು. ಆಮೇಲೆ ತಿಳಿಯಿತು ನಮ್ಮ ಸಂಸಾರದ ಆಸ್ತಿ-ಪಾಸ್ತಿ ತೀರ ಕೆಳ ಮಟ್ಟದ್ದು. ನನ್ನ ನೌಕರಿ ಅದರ ದೊಡ್ಡಸ್ತಿಕೆಗಿಂತ ಆಸ್ತಿಯ ಅಳತೆ ಮೇರೆಗೆ ತೀರ್ಮಾನ ಬದಲಾಯಿಸಿದರು ಎಂದು. ನಾನು ಬೇಡವಾದೆನು. ನನಗೆ ಏನೂ ಬೇಸರವಾಗಲಿಲ್ಲ. ನನ್ನ ದಿನಚರಿಯಲ್ಲಿ ಬರೆದೆ 'ನ-ಪಾಸ್‌'. ನನ್ನದು ಹಾಗಿರಲಿ, ಅವರದು 'ಪಾಸ್‌'.  ವರನನ್ನು ಹುಡುಕುವ ಪಟ್ಟಿಯಲ್ಲಿ ನಾನೂ ಇದ್ದೆ ಅನ್ನುವುದು ಒಂದು ಸಂಗತಿ. ಮುಂದೆ ಆ ಕನ್ಯೆಗೆ ಬೇರೊಬ್ಬರನ್ನು ಗೊತ್ತು ಮಾಡೇ ಬಿಟ್ಟರು.

ಹೀಗೇ ನಮ್ಮ ಊರಿಗೆ ಆಗಾಗ್ಗೆ ಹೋಗಿ ಬರುತ್ತಿದ್ದುದು ಇತ್ತು. ಒಂದು ಸಾರಿ ಊರಿಗೆ ಹೋಗಿದ್ದಾಗ ನಮ್ಮ ತಾಯಿ ಒಬ್ಬರು ಹೆಣ್ಣು ಪ್ರಸ್ತಾಪ ಮಾಡಿದ್ದಾರೆ, ಹೋಗಿ ನೋಡೋಣವೇ ಎಂದು ದನಿ ಗೂಡಿಸಿದರು. ಇಷ್ಟವಿದ್ದರೂ ಬಿಗುಮಾನದಿಂದಲೇ ಹ್ಹೂ ಅಂದೆ. ಹೆಣ್ಣು ನೋಡಲು ಅವರ ಮನೆಗೆ ನಾವೆಲ್ಲಾ ಹೋಗಿದ್ದಾಯಿತು. ಅಲ್ಲಿ ಉಪಹಾರ ಹಾಡು ಇವುಗಳ ಸಂಪ್ರದಾಯದ ನಡುವಳಿಕೆ ಆದಮೇಲೆ ನಮ್ಮ ಅಭಿಪ್ರಾಯ ಕೇಳಿದರು. ಅಮೇಲೆ ತಿಳಿಸುತ್ತೇವೆಂದು ಹೊರಟು ಬಂದೆವು. ನಾನು ಹಿಂದಿರುಗುವ ದಿನ ಟ್ರೇನ್‌ ಹತ್ತಿ ಕುಳಿತಿದ್ದೇನೆ. ನನಗೆ ಆಶ್ಚರ್ಯ ಅಂದರೆ ಹಿನ್ನೆಯೇ ನೋಡಿದ್ದ ಹುಡುಗಿಯ ಅಣ್ಣಂದಿರು ಹಾಜರ್‌. ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದೇವೆ ಅಂದರು. ಈ ವಿಷಯದಲ್ಲಿ ನಮ್ಮ ಹಿರಿಯರನ್ನು ಸಂಪರ್ಕಿಸಿ; ನಾನು ಹೇಳಬಾರದು ಅಂದೆ. ಅವರು ಒತ್ತಾಯ ಮಾಡುತ್ತಲೇ ಇದ್ದರು. ಸ್ವಲ್ಪ ಬಣ್ಣ ಕಡಿಮೆ ಅಷ್ಟೇ; ಉಳಿದಿದ್ದು ಎಲ್ಲಾ ಚೆನ್ನಾಗಿಯೇ ಇದೆ. ಪದವೀಧರೆ, ಹಾಡು, ಹಸೆ, ಅಡಿಗೆ ಎಲ್ಲದರಲ್ಲೂ ಕಡಿಮೆ ಇಲ್ಲ ಎಂದು ಪುನರುಚ್ಚರಿಸಿದರು. ( ಬಣ್ಣ ಕಡಿಮೆ ಆದ್ದರಿಂದಲೇ -- ಎಲ್ಲಿ ನಮ್ಮ ಮಕ್ಕಳೂ ಹಾಗೆ ಆಗಿ ನಾವು ಅವರ ಮದುವೆ ಮಾಡಲುಪೇಚಾಟ ಪಡಬೇಕಾಗುತ್ತದೆಂದು-- ಭಯ, ನಮ್ಮ ತಾಯಿ ಸ್ಫುರದ್ರೂಪಿ ತಂದೆ ಕಟ್ಟು ಮಸ್ತು ಆದರೆ ಅವರದು ಚಿಗುಳಿ-ತಂಬಿಟ್ಟಿನ ಸಾಮ್ಯ. ಹೀಗಾಗಿ ನಮ್ಮ ಅಕ್ಕ-ತಂಗಿಯರು ಅಣ್ಣ-ತಮತಮ್ಮಂದಿರಲ್ಲಿ ಒಬ್ಬರ ತಪ್ಪ ಒಬ್ಬೊಬ್ಬರು ತಿಳಿ ಇನ್ನೊಬ್ಬಬ್ಬರು ಅಷ್ಟಕ್ಕಷ್ಟೇ!). ಮುಂದಿನದನ್ನು ಹಿರಿಯರಲ್ಲಿ ವಿಚಾರಿಸಿ ಎಂದು ಕೈತೊಳೆದುಕೊಳ್ಳಲು ಪ್ರಯತ್ನಿಸಿದೆ. ಬಿಡಲೇ ಇಲ್ಲ. ನಿಮಗೆ ಒಪ್ಪಿಗೆ ಇದ್ದರೆ ನಾವು ಮುಂದುವರೆಯುತ್ತೇವೆ ಇಲ್ಲದಿದ್ದರೆ ಇಲ್ಲ ಎಂದು ಬಲವಂತ ಮಾಡಿದರು. ನನಗೂ ಮುಜುಗರವಾಗಿ ಹುಡುಗಿ ನನಗೆ ಒಪ್ಪಿಗೆ ಬರಲಿಲ್ಲ ಎಂದು ಹೇಳಿಬಿಟ್ಟೆ. ಥ್ಯಾಂಕ್ಸ್‌ ಹೇಳಿ ಹೊರಟುಹೋದರು. ಹುಡುಗಿ ಅವಳ ದಿನಚರಿಯಲ್ಲಿ 'ನ-ಪಾಸ್‌' ಎಂದು ಬರದುಕೊಂಡಳೋ ಏನೋ!

ಇನ್ನೆಲ್ಲಿ ಇನ್‌ಎಲಿಜಬಲ್‌ ಬ್ಯಾಚುಲರ್‌ ಆಗಿಬಿಡುತ್ತೇನೋ ಎಂಬ ಯೋಚನೆಯಲ್ಲಿ ದಿನ ಕಳೆಯುತ್ತಿದ್ದಾಗ ಇನ್ನೊಂದು ಕರೆ ಬಂತು, ಯಾವುದಕ್ಕೂ ದುಡುಕಬಾರದೆಂದು ಜಾಗರೂಕತೆಯಿಂದ ಇರಲು ತೀರ್ಮಾನಿಸಿದ್ದೆ. ಹುಡುಗಿ ೧೮ ತುಂಬಿದಮೇಲೆ ಗಂಡು ಹುಡುಕಲು ಪ್ರಾರಂಭಿಸಿದ್ದರು. ತೆಳ್ಳಗೆ ಬೆಳ್ಳಗೆ ಇದ್ದಳು. ಎಲ್ಲರಿಗೂ ಒಪ್ಪಿಗೆ ಆಯಿತು. ಹೆಣ್ಣಿನ ಕಡೆಯವರಿಗೆ ನಾನು ಸ್ವಲ್ಪ ಕಡಿಮೆ ಉದ್ದ ಅನ್ನಿಸಿತೇನೋ, ಹುಡುಗಿಯ ಅಣ್ಣ ನನ್ನ ಪಕ್ಕದಲ್ಲಿ ಬಂದು ಬಂದು ನಿಂತುಕೊಳ್ಳುತ್ತಿದ್ದರು. ನನ್ನ ಎತ್ತರ ಅಂದಾಜಿಸಲು ಪ್ರಯತ್ನಿಸುತ್ತಿದ್ದರೆಂದು ಕಾಣಿಸುತ್ತದೆ. ಆಮೇಲೆ ತಿಳಿಯಿತು; ಗಂಡು-ಹೆಣ್ಣು ಒಂದೇ ಎತ್ತರವಿರಬಹುದು ಎಂದು ಅನ್ನಿಸಿತಂತೆ. ನನ್ನ ಇನ್ನೆಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮದುವೆಗೆ ಒಪ್ಪಿದರಂತೆ. ಬೇಡ ಅನ್ನುವುದು ಬೇಡ ಅನ್ನಿಸಿರಬೇಕು. ಇಬ್ಬರೂ 'ಪಾಸ್‌'

ನಾವಿಬ್ಬರೂ ಈಗ ಗಂಡ-ಹೆಂಡತಿಯರು. ಒಂದು ಸರ್ತಿ ಹೆಂಡತಿಯನ್ನು ಕೇಳಿದೆ, ನಮ್ಮ ಎತ್ತರ ಸಾಮ್ಯ ನಿನಗೆ ಹೇಗನಿಸುತ್ತದೆ ಎಂದು. ಅವಳು ನಕ್ಕುಬಿಟ್ಟಳು. ಆಗಲೇ ಯೋಚಿಸಲಿಲ್ಲ.ಈಗ ಯಾಕೆ ಯೋಚನೆ ಅಂದಳು. ಅದೂ ಅಲ್ಲದೆ ಹುಡುಗಿಯರು ಗಂಡನ್ನು ಇಷ್ಟವಿಲ್ಲ ಎಂದು ಹೇಳುವುದು ಸಾಧ್ಯ ಎಂದು ನನಗೆ ಗೊತ್ತೇಇರಲಿಲ್ಲ. ದೊಡ್ಡವರ ತೀರ್ಮಾನಕ್ಕೆ ತಲೆ ಬಾಗಿಸಬೇಕೆಂಬುದು ಅಷ್ಟೇ ನನಗೆ ಗೊತ್ತಿದ್ದಿದು ಎಂದಳು. ಇಷ್ಟಕ್ಕೇ ನಿಲ್ಲಲಿಲ್ಲ ಇದು, ನಿಮಗೇನನ್ನಿಸಿತು ಎಂದು ಮರು ಪ್ರಶ್ನೆ ಮಾಡಿದಳು. ನನಗೆ ಏನೂ ಕೊರೆಇಲ್ಲ, ಆದರೆ ನಾವಿಬ್ಬರೂ ಜೊತೆಯಲ್ಲಿ ಹೋಗುತ್ತಿದ್ದಾಗ ಜನ ನಮ್ಮನ್ನು ಕುತೋಹಲದಿಂದ ನೋಡುತ್ತಾರೆನ್ನಿಸಿದೆ ಅಂದೆ. ಅವರುಗಳ ಅನ್ನಿಸಿಕೆ ನಮಗೇಕೆ ಎಂದಳು ನನ್ನವಳು.

ಎಷ್ಟು ಸಾರಿ ಬೇಡವೆನ್ನುವುದು. ಅದಕ್ಕೆ ಅಂತ್ಯ ಹೇಳುವಾಗ ಆದದ್ದು ಆಗಲಿ ಎಂದು ಮುಗಿಸಿಬಿಟ್ಡಿದ್ದೆ.  Friday, March 3, 2017

ರಾಯಚೂರಿನ ಕೋಟೆ
ರಾಯಚೂರಿನಲ್ಲಿದ್ದ ಪ್ರಾಚೀನ ನುತ್ತು, ಐತಿಹಾಸಿಕ ಸ್ಮಾರಕಗಳಲ್ಲಿ ಆತಿ ಮಹತ್ವದ್ದೆಂದರೆ ೮೦೦ ವರ್ಷಗಳ ಹಿಂದಿನ ಆಲ್ಲಿಯ
ಕೋಟೆ. ಆದರ ಚಿತ್ರವನ್ನು ಮೇಲೆ ಕೊಡಲಾಗಿದೆ. ರೂಢಿಯ ಮಾದರಿಯ ಮೇಲೆ ಇದನ್ನು ಕಟ್ಟದ್ದರೂ ಇದರಲ್ಲಿ ಎಷ್ಟೋ
ವೈಶಿಷ್ಟ್ಯಗಳಿನೆ. ಇದರ ೩ ಕಡೆಗೆ ಎತ್ತರವಲ್ಲದ ಆದರೆ ಬಹು ಬಲಿಷ್ಠನಾದ ಎರಡು ಸುತ್ತುವಲಯಗಳಿನೆ- ನಾಲ್ಕನೆಯ
ಕಡೆಯೆಂದರೆ ದಕ್ಷಿಣದಲ್ಲಿ ಚಿತ್ರಮಯನಾದ ೩ ಬೆಟ್ಟಗಳ ಸಾಲುಗಳಿನೆ. ಆವುಗಳ ಮೇಲೆ ಬಲಿಪ್ಥದಾದ ಕೋಟಿ ಗೋಡೆಗ
ಳನ್ನು ಕಟ್ಟಲಾಗಿದೆ. ಮಧ್ಯದ ಬೆಟ್ಟವು ಬಹಳ ಎತ್ತರನಾದುದು- ಇದರ ಮೇಲೆ ಒಂದು ಗುಡೆ ಮತ್ತು ವಿಜಾವುರ ಕೈಲಿಯ
ಒಂದು ಚಿಕ್ಕ ಮಸೀದೆ ಇದೆ.

ಮುನ್ನೆಲದ ಮಧ್ಯದಲ್ಲಿ ಕಾಣುವ ಎರಡು ಗೋಡೆಗಳ ಪೈಕಿ ಒಳಗಿನ ಗೋಡೆಯನ್ನು ಜೆನ್ನಾಗಿ ಕೆತ್ತಲಾದ ದೊಡ್ಡ ದೊಡ್ಡ
ಕಲ್ಲುಗಳಿಂದ ಸುಂದರನಾಗಿ ಜೋಡಿಸಿ ಕಟ್ಟಲಾಗಿದೆ, ಗಚ್ಚು ಅಥವಾ ಸಿಮೆಂಟಿನಿಂದ ಕಲ್ಲುಗಳನ್ನು ಜೋಡಿಸಿಲ್ಲ. ಪೌಳಿಯ
ಪಶ್ಚಿಮ ಭಾಗದಲ್ಲಿ ಜೋಡಿಸಲಾದ ೪೧ ಅಡಿ ೮ ಅಂಗುಲ ಉದ್ದವಿದ್ದ ದೊದ್ದ ಕಲ್ಲಿನಮೇಲೆ ಬರೆದ ಕನ್ನಡದ ದೀರ್ಘವಾದ
ಶಾಸನದ ಪ್ರಕಾರ ಇದು ಹಿಂದುಗಳು ಕಟ್ಟಸಿದ್ದೆಂದು ತಿಳಿವುದು. ಈ ಶಾಸನದಲ್ಲಿ ರಾಯಚೂರ ವಿಜಯ ಮತ್ತು, ವರಂಗಲ್ಲಿನ
ಒಡತಿಯಾದ ರಾಣಿ ರುದ್ರಮ್ಮನು ತನ್ನ ಆಳಿಕೆಯ ಕ್ರಿ. ಶ. ೧೨೯೮ ನೆಯ ಇಸ್ಥಿಯಲ್ಲಿ ಈ ಕೋಟೆಯನ್ನು ಕಟ್ಟಸಿದ ವಿಷಯ
ಬರೆದಿದೆ. ಈ ಕಲ್ಲ ಬಲಗಡೆಗೆ ಸ್ವಲ್ಪದೂರದಲ್ಲಿ ಇನ್ನೊಂದು ಕಲ್ಲಿದೆ. ಇದರ ಚಿತ್ರವನ್ನೂ ಇಲ್ಲಿ  ಕೊಡಲಾಗಿದೆ.ಶಾಸನವನ್ನು ಕೊರೆದ ಈ ದೊಡ್ಡ ಕಲ್ಲನ್ನು ಕಲ್ಲು ಹುಟ್ಟುವ ಸ್ಥಳ ದಿಂದ ಇಲ್ಲಿಯ ವರೆಗೆ ಗ ಟ್ಟಿ ಗಾ ಲಿ ಯ ಬಂಡಿಯ ಮೇ ಲೆ
ಎಷ್ಟೋ ಕೋಣಗಳಿಂದ ಹೇಗೆ ಎಳೆದು ಕೊಂಡು ತರಲಾಯಿತೆ೦ಬ ಮತ್ತು ಬಂಡಿಯನ್ನು ಮನುಷ್ಯರು ಹೊಡೆಯುತ್ತ ಕೋಣಗಳನ್ನು ಬಡಿಗೆಯಿಂದ ಸದೆಯುತ್ತಿರುವ ನುತ್ತು, ಬಂಡಿಯನ್ನು ಮುಂದಕ್ಕೆ ನುಗ್ಗಿಸುವುದಕ್ಕಾಗಿ ಗಾಲಿಗಳಿಗೆ ಸೊನ್ನೆ ಕೋಲನ್ನು ಹಾಕುತ್ತಿರುವ ಒಂದು ಸುಂದರ ಚಿತ್ರವನ್ನು ಆ ಕಲ್ಲ ಮೇಲೆ ನೋಡುವಿರಿ. ಮ.ಘ-ಪ. ನಿಜಾಮರನರ ಸರಕಾರದ ಪ್ರಾಚೀನ ವಸ್ತು ಸಂಶೋಧನಾ ಖಾತೆಯ ಸಹಾಯಕ ಮುಖ್ಯಾಧಿಕಾರಿಗಳಾಗಿದ್ದ ಮಿ. ಸೈಯದ್ ಯೂಸಫ್ ಅವರು ಈ ಕೋಟೆಯನ್ನು ಪರಿಶೀಲಿಸಿ ಈ ಕೆತ್ತನೆಯ ಪ್ರತಿಮಾಡಿದರು. "ಕೋಣಗಳ ಸಾಲುಗಳನ್ನು ಬಹಳ ಸುಂದರನಾಗಿ ಚಿತ್ರಿಸಲಾಗಿದೆ- ಅವುಗಳಿಗೆ ಆಗುತ್ತಿರುವ ಆಯಾಸನ್ನು ಕೆಲವುಗಳ ನಾಲಗೆಯನ್ನುಹೊರಚಾಚಿದಂತೆ ಚಿತ್ರಿಸಿ ನುತ್ತೆ ಕೆಲವುಗಳ ಸೊಂಟವನ್ನು ಬಗ್ಗಿದಂತೆ ಚಿತ್ರಿಸಿ ಉಳಿದುವುಗಳ ಬಾಲಗಳು ಸಸುರುಳಿಸುತ್ತಿ ಮೇಲಕ್ಕೆ ಎದ್ದಂತೆ ಚಿತ್ರಿಸಿ ಕಣ್ಣಿಗೆ ಕಟ್ಟುವಂತೆ ಮನೋಹರನಾಗಿ ಕೊರೆಯಲಾಗಿದೆ. ಕೋಣಗಳ ಮೇಲೆ ಹೆಚ್ಚಿನ ಭಾರ ಬಿದ್ದಾಗ ಸಾಮಾನ್ಯವಾಗಿ ಅವು ಹೀಗೆಯೆ ವರ್ತಿಸುವುವು. ಖಂಡಿತವಾಗಿ ಇದು ರೇಖಾವಿದ್ಯೆಯ ಸೋಜಿಗವನ್ನು ಸೂಚಿಸ3ವುದು. ಅದರಲ್ಲೂ ಇದನ್ನು ಚಿತ್ರಿಸಿದಕಾಲವನ್ನು ಲಕ್ಷ್ಯಕ್ಕೆ ತಂದಾಗ ಸೋಜಿಗವು ಮತ್ತಷ್ಟು ಹೆಚ್ಚುವುದು " ಎಂದ3 ಮಿ. ಸೈಯದ್
ಯೂಸಫ್ ಅವರು ಹೇಳಿದ್ದಾರೆ. ಇನ್ನೂ ಬಲಭಾಗಕ್ಕೆ ಮೂರನೆಯ ಕಲ್ಲೊಂದಿದೆ. ಅದರ ಮೇಲೆ ಅತ್ಯಲಂಕೃತವಾದ
೬ ರಥಗಳ ಮೆರವಣಿಗೆಯನ್ನು ಕೊರೆಯಲಾಗಿದೆ. ಕುತ್ತಿಗೆಯ ಸುತ್ತು, ಇರುನ ಸುಂದರವಾದ ಕೊರಳಪಟ್ಟಯಿಂದ ರಂಜಿಸುನ
ದೊಡ್ಡ ಇಣಿಯ ಎತ್ತು,ಗಳು ಆವನ್ನು ಎಳೆಯತ್ತಿರುವುವು- ಇದರಂತೆ ಕೆತ್ತಲಾದ ಇನ್ನೂ ಎಷ್ಟೋ ಕಲ್ಲುಗಳಿನೆ. ಕೆಲವುಗಳ
ಮೇಲೆ ರಾಮಾಯಣದ ದೃಶ್ಯಗಳನ್ನು ಕೆತ್ತಲಾಗಿದೆ. ಇನ್ನೂ ಕೆಲವು ಹೂಬಳ್ಳಿಗಳಿಂದ ಕೂಡಿವೆ ಅಥವಾ ಪಕ್ಷಿ ನುತ್ತು, ಪ್ರಾಣಿ
ಗಳಿ ಚಿತ್ರಗಳಿಂದ ಇಲ್ಲನೆ ಮನುಷ್ಯರ ನಾನಾ ನಿನಾಕ್ಟ~ಕ್ರಿಸಗಳಿಂದ ಕೂಡಿವೆ.

ಕೋಟಿಯ ಹೊರವಲಯವನ್ನಾದರೊ ಹೆಚ್ಚು ಕಾಡಾದ ಕಲ್ಲುಗಳಿಂದ ಕಟ್ಟಲಾಗಿದೆ, ಇದನ್ನು ಕಟ್ಟಿದವರು ಮಹ
ಮ್ಮದೀಯರು. ಹುಡೆಗಳು, ಬಾಗಿಲಗಳು ಮತ್ತು ಊರ ಮಸೀದೆಗಳ ಮೇಲೆ ಕೆತ್ತಲಾದ ಅರಬಿ ಮತ್ತು ಫಾರಸಿ ಭಾಷೆಯ
ನಾನಾ ಶಾಸನಗಳಿಂದ ಈ ಸಂಗತಿ ತಿಳಿವುದು. ಆಮೇಲಿನ ಬಹಮನಿಗಳು ನುತ್ತು ವಿಜಾಪುರದ ಆದಿಲ್ ಷಾಹಿಗಳು ಕಟ್ಟಿದ
ನಾನಾ ಕಟ್ಟಡಗಳ ಸ್ಮಾರಕಾರ್ಥವಾಗಿ ಈ ಶಾಸನಗಳನ್ನು ನಿಲ್ಲಿಸಲಾಗಿದೆ.

ಈ ಲೇಖನವನ್ನು ಹಳೆಯ ಹೈದರಾಬಾದ ಸಂಸ್ಥಾನದ ಸರ್ಕಾರದಿಂದ ಪ್ರಚುರವ಻ಗುತ್ತಿದ್ದ ಹೈದರಾಬಾದ ಸಮಾಚಾರ 1941 ನೇ ಇಸವಿಯ ಪತ್ರಿಕೆಯಿಂದ ಉದ್ಧರಿಸಲಾಗಿದೆ. 


Sunday, October 16, 2016

ಮುದ್ರಿತ ಪುಸ್ತಕವನ್ನು ಪಠ್ಯಕ್ಕೆ ತರುವುದು

ಚಿಲುಮೆ ತಾಣದಲ್ಲಿ ಕೃತಿಗಳನ್ನು ಪ್ರಕಟಿಸುವ ಕೆಲಸಕ್ಕೆ ಸ್ವಯಂಸೇವಕರು ಅನುಸರಿಸಬೇಕಾದ ಕ್ರಮಕ್ಕೆ ಮಾರ್ಗದರ್ಶನವನ್ನು ಕೊಡಲು ಈ ಸೂಚಿಗಳನ್ನು ತಯಾರಿಸಲಾಗಿದೆ.
೧. ಪ್ರಕಟಿತ ಕೃತಿಗಳನ್ನು ಚಿಲುಮೆ ತಾಣದಲ್ಲಿ ಮರು ಪ್ರಕಟಣೆಗೆ ಅನುಮತಿ ಪಡೆಯಲು ನಮ್ಮ ತಾಣದ ಉದ್ದೇಶ ಮತ್ತು ಕಾರ್ಯವನ್ನು ವಿವರಿಸಿ ಲೇಖಕರ ಮನ ಒಲಿಸುವುದು.  
೨.ಅನುಮತಿ ದೊರೆತ ಕೃತಿಗಳ ಪ್ರತಿಯನ್ನು ಅ) ಮನವಿ ಮಾಡಿ  ಲೇಖಕರಿಂದಲೇ ಪಡೆಯುವುದು ಆ)ಗ್ರಂಥಾಲಯಗಳಿಂದ ಎರವು ತರುವುದು ಇ)ಖರೀದಿಮಾಡುವುದು.
೩.ಪ್ರತಿಗಳಿಂದ ಪಠ್ಯ (ಯುನಿಕೋಡ್/ನುಡಿ/ಬರಹ) ಕ್ರಮಕ್ಕೆ ತರುವುದು. ಅ) ವೇಗವಾಗಿ/ನೇರವಾಗಿ ಕೀಲಿಕರಿಸಲು ಪರಿಣಿತಿ ಇದ್ದರೆ ಆ ಮಾರ್ಗವನ್ನು ಅನುಸರಿಸಬಹುದು.ಆ)ಕಂಪ್ಯೂಟರ್‌ನಲ್ಲಿ ಪರಿಣಿತರಾಗಿದ್ದು ಹಾರ್ಡ್‌ವೇರ್‌/ಸಾಫ್ಟ್‌ವೇರ್‌ಗಳ ಅನುಕೂಲತೆಯಿದ್ದರೆ ಸ್ಕ್ಯಾನಿಂಗ್ ಮತ್ತು ಓ.ಸಿ.ಆರ್‌ ಮತ್ತು ಕರಡು ತಿದ್ದಿ ತಯಾರುಮಾಡಬಹುದು.

ಇದನ್ನು ಮಾಡಲು ಈಗಾಗಲೇ ಗೊತ್ತಿರುವ ರೀತಿ ಈ ರೀತಿ ಇದೆ..
ಅ) ಎರಡು ಪುಟಗಳು (ಪುಸ್ತಕ ತೆರೆದಂತೆ) ಬರುವಂತೆ ಪ್ರತಿ ಸ್ಕ್ಯಾನ್‌ಕಡತವನ್ನು ಒಂದೊಂದಾಗಿ ಮಾಡಿ ಅಷ್ಟೂ ಪುಸ್ತಕದ ಸಮೂಹವನ್ನು ಒಂದು ಫೋಲ್ಡರ್‌ನಲ್ಲಿ ಇರಿಸಿಕೊಳ್ಳಬೇಕು.
ಆ) ‘scan tailor’ ಎಂಬ ಉಚಿತ ತತ್ರಾಂಶವು ಎರಡು ಪುಟವನ್ನು ಒಡೆದು ಒಂದೊಂದು ಪುಟಗಳಾಗಿ ಮಾಡಿ ಮತ್ತೆ ಅವನ್ನು ನೆಟ್ಟಗೆ ತಿರುಗಿಸಿ, ಬೇಡದ ಕರಿ ಅಂಚುಗಳನ್ನು ತೆಗೆದು ಅಚ್ಚುಕಟ್ಟು ಮಾಡಿಕೊಡುತ್ತದೆ.
ಆ)ಓ.ಸಿ.ಆರ್. ಮಾಡಲು ಈಗ ಗೂಗಲ್‌ ಡ್ರೈವ್‌ ಉಪಯೊಗಿಸಬೇಕು.  ಗೂಗಲ್ ಡ್ರೈವ್ tiff ಪುಟಗಳನ್ನು ಸಂಸ್ಕರಿಸುವುದಿಲ್ಲವಾದ್ದರಿಂದ, scan tailor tiff ಪುಟಗಳನ್ನು ಹೊರಹಾಕುವುದರಿಂದ ಇಲ್ಲಿ ಸ್ವಲ್ಪ ಹೆಚ್ಚಿನ ಕೆಲಸವಿದೆ.i) scan tailor ಉತ್ಪನ್ನವನ್ನು PDF PNG Jpeg            ಅಗಿ ಮಾರ್ಪಡಿಸಿಕೊಳ್ಳಬೇಕು. ಇದಕ್ಕೆ ಗೂಗಲ್ ಡ್ರೈವ್‌ನಲ್ಲು ಸೌಲಭ್ಯವಿದೆ ಅಥವಾ ಅನುಕೂಲವಿರುವ /ಪರಿಚಯವಿರುವ ಮಾರ್ಗವನ್ನು ಅನುಸರಿಸಬೇಕು. ಇಲ್ಲಿ ಇನ್ನೊಂದು ವಿಷಯ ಮುಖ್ಯವಾಗುತ್ತದೆ: ಗೂಗಲ್ ಡ್ರೈವ್ ಒಂದೊಂದು ಕಂತಿಲ್ಲೂ ೧೦ ಪುಟಗಳಿಗೆ ಮೀರದಷ್ಟನ್ನು ಮಾತ್ರ ಒ.ಸಿ.ಆರ್‌. ಮಾಡುತ್ತದೆ-ಆದ್ದರಿಂದ ಗೂಗಲ್ ಡ್ರೈವ್ ಗೆ ಸಣ್ಣ ಕಡತಗಳಾಗಿ ಒಡೆದು ಅಪ್‌ಲೋಡ್‌ ಮಾಡಬೇಕು.ii) ಗೂಗಲ್ ಡ್ರೈವ್ನಲ್ಲಿ ನಾವು ಆ ಕಡತವನ್ನು ರೈಟ್‌ ಕ್ಲಿಕ್‌ ಮಾಡಿ open with “google docs” ಆಯ್ದುಕೊಂಡರೆ ಅದೇ ಗೂಗಲ್ ಡ್ರೈವ್ನಲ್ಲೇ ಓ.ಸಿ.ಆರ್‌ ಆದ ಪುಟ ಮೂಡುತ್ತದೆ. ಈಗ ಸಧ್ಯಕ್ಕೆ ಓ.ಸಿ.ಆರ್ ಆದ ಪುಟದಲ್ಲಿ ಕೆಲವು ಕಡೆ ತೆಲುಗು ಅಕ್ಷರಗಳು ಬರುತ್ತಿವೆ. ಅದು ಮುಂದೆ ಗೂಗಲ್‌ನವರು ಸರಿಪಡಿಸಬಹುದು.
ಇ). ವ್ಯಾಕರಣ ದೋಷಗಳನ್ನು ತಿದ್ದಿಕೊಳ್ಳುವ ವಿಷಯ: ಗೂಗಲ್‌ ಡ್ರೈವ್ ನಿಂದ ನಿಮ್ಮ ಕಂಪ್ಯೂಟರ್‌ನ ಬೇರೆಲ್ಲಾದರೂ copy+paste ಮಾಡಿಕೊಂದು ವ್ಯಾಕರಣ ದೋಷಗಳನ್ನು ತಿದ್ದಿಕೊಳ್ಳಬೇಕು. ವ್ಯಾಕರಣ ದೋಷ ತಿದ್ದಪಡಿಗೆ notepad++ ಎಂಬ ಉಚಿತ ತತ್ರಾಂಶ ಬಹಳ ಉಪಯೋಗಕಾರಿ. ಅದರಲ್ಲಿ ಕಡತಗಳ ಸಮೂಹದಲ್ಲಿರುವ ತಪ್ಪುಗಳನ್ನು ಸಾರಾಸಗಟಾಗಿ ತಿದ್ದಬಹುದು. ಮತ್ತು ಯುನಿಕೋಡ್‌ ಗಳಲ್ಲಿ ಒಂದೊಂದೇ ಭಾಗವನ್ನು ಅಳಿಸಿ ಬೇರೆ ಲಿಪ್ಯಂಶವನ್ನು ಸೇರಿಸಬಹುದು. ಶ್ರಮ ಮತ್ತು ಸಮಯ ಉಳಿಯುತ್ತದೆ. Spell-check ಉಪತತ್ರಾಂಶ ಅಳವಡಿಸಿಕೊಂಡರೆ ಇನ್ನೂ ಕೆಲಸ ಸುಗಮವಾ

Saturday, September 26, 2015

ಕಿರು ಚಿತ್ರದಲ್ಲಿ ಕಿರು......

ನಾಗತಿಹಳ್ಳಿ ಚಂದ್ರಶೇಖರ್‌ ಅವರ ಒಂದು ಕಿರುಚಿತ್ರದಲ್ಲಿ ಉಪವನಗಳಲ್ಲಿ ಹಿರಿಯನಾಗರೀಕರ ತಂಡದ ನಗೆಕ್ಲಬ್ಬುಗಳ ತುಣುಕು ಸಂಯೋಜಿಸಲು ಬನಶಂಕರಿ ಎರಡನೇ ಹಂತದ "ಜ್ಞಾನ ಜ್ಯೋತಿ" ಸಂಸ್ಥೆಗೆ ಕೋರಿಕೆ ಬಂತು. ಅದನ್ನು ನಡೆಸಿಕೊಡಲು ಒಪ್ಪಿ ಒಂದಷ್ಟು ಉತ್ಸಾಹಿ 'ಹಿರಿಯ-ತರುಣ'ರನ್ನು ಕಲೆಹಾಕಿ, ಅವರೆಲ್ಲರೂ ಒಂದು ಕಡೆ ಗುಂಪಾಗಿ ಸೇರಿದೆವು. ಕಿರುಚಿತ್ರದ ನಿರ್ವಾಹಕರು ನಮ್ಮನ್ನೆಲ್ಲಾ ಸ್ಟುಡಿಯೋಗೆ ವಾಹನದಲ್ಲಿ ಕರೆದೊಯ್ದರು. ನಾನೂ ಆ ಗುಂಪಿಗೆ ಸೇರಿದ್ದೆ. ಮೊದಲು ಏನನ್ನು ಹೇಗೆ ಮಾಡಬೇಕೆಂದು ತೋರಿಸುತ್ತಿದ್ದರು; ಅದರಂತೆ ನಾವು ಮಾಡಬೇಕು. ಕ್ಯಾಮರಾದ ದೃಷ್ಟಿಗೆ ಬೀಳಲು ಎಲ್ಲರೂ ಕಸರತ್ತು ನಡೆಸುತ್ತಿದ್ದರು. ಏಕಪ್ಪಾ ಇಷ್ಟೊಂದು ಕಸರತ್ತು ಅಂದರೆ ಆ ಚಿತ್ರೀಕರಣಕ್ಕೆ ಒಂದೇ ಕ್ಯಾಮರ ಉಪಯೋಗಿಸಲು ಯೋಜಿಸಿದ್ದರು. ಒಂದು ದೃಶ್ಯದಲ್ಲಿ ಹೆಜ್ಜೆಯಾಗಿ ಕ್ಯಾಮರಾ ಕಡೆಗೆ ಮುಂದುವರಿಯಬೇಕಾಗಿತ್ತು. ಆಗ ಅಕ್ಕಪಕ್ಕದವರ ತಳ್ಳುವಿಕೆಯಿಂದ ಒಬ್ಬಿಬ್ಬರು ಬಿದ್ದದ್ದೂ ಉಂಟು.

ಮೊದಲೇ ಟ್ರ್ಯಾಕ್‌ ಷೂ ಹಾಕಿಕೊಂಡು ಬರಲು ಹೇಳಿದ್ದರು. ಒಬ್ಬ ಹಿರಿಯರು ಸಾಧಾರಣ ಷೂ ಹಾಕಿ ಬಂದಿದ್ದರು. ಅದನ್ನು ನೋಡಿ ಡೈರೆಕ್ಟರ್‌ 'ಏನ್ರೀ ಆಫೀಸಿಗೆ ಹೋಗುವ ಹಾಗೆ ಪಾರ್ಕಿಗೆ ಬಂದಿದ್ದೀರಿ' ಅಂದು ಬಿಡುವುದೇ? ಅವರು ಬೇಗ ಹೋಗಿ ತಂದಿದ್ದ ಟ್ರ್ಯಾಕ್‌ ಷೂಗೆ ಬದಲಾಯಿಸಿದರು.

ಸಾಯಂಕಾಲದ ವರೆಗೆ ಏನೋನೋ ಮಾಡಲು ಹೇಳಿ ಚಿತ್ರೀಕರಿಸಿಕೊಂಡರು. ತಿಂಡಿ ತೀರ್ಥ ಎಲ್ಲಾ ಕೊಟ್ಟರು; ವಾಪಸ್ಸು ಹೊರಟಿದ್ದ ಜಾಗಕ್ಕೆ ತಂದು ಬಿಟ್ಟರು. ಯಾವತ್ತು ಆ ಧಾರಾವಾಹಿ ಪ್ರಾರಂಭವಾಗುತ್ತೆ ಅಂತನೂ ನಮಗೆ ತಿಳಿದಿರಲಿಲ್ಲ. ನಾವಿರುವ ದೃಶ್ಯ ಎಂದು ಟಿವಿಲಿ ಬರುತ್ತೆ ಅಂತಲೂ ಗೊತ್ತಿರಲಿಲ್ಲ. ದಿನವೂ ಅ ಧಾರಾವಾಹಿಗಾಗಿ ಟಿವಿಯನ್ನು ನೋಡಿದ್ದೇ ನೋಡಿದ್ದು! ಇರಲಿ ಅದನ್ನು ರಿಕಾರ್ಡ್‌ಮಾಡಲು ಬೇಕಾದ ಸಲಕರಣೆ ಹೊಂದಿಸಲು ಸ್ವಲ್ಪ ಹಣವೂ ಕೈಬಿಟ್ಟಿತು.

ಅಂತೂ ಇಂತು ಎಲ್ಲಾ ಆದಮೇಲೆ ದೃಶ್ಯದ ತುಣುಕು ನೋಡಿದವರು ತಾವು ಪರದೆಯ ಮೇಲೆ ಸರಿಯಾಗಿ ಕಾಣದಿದ್ದಾಗ ಇದ್ದ ಆಸೆಗಳಿಗೆ ಎಳ್ಳು ನೀರು ಬಿಟ್ಟು ಬರೀ ನಮ್ಮ ಬೆನ್ನು ಬಿದ್ದಿದೆ ಅಂದುಕೊಂಡಿರಬೇಕು! ಅಂತೂ ಇಂತೂ ನಾವೂ ಟಿವಿಪರದೆಯಲ್ಲಿ 


ಕಾಣಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಒಂದು ಅವಕಾಶ!
ಆ ದೃಶ್ಯ ನೋಡಿ ನೀವೂ ಅನಂದಿಸಿರಿ.
  

Friday, August 28, 2015

ಕನ್ನಡ OCR

ನಾನು  ಕನ್ನಡ OCR ಸಾಫ್ಟ್ವೇರ್ ಬಗ್ಗೆ ಈ ಹಿಂದೆಯೇ ಬರೆದಿದ್ದೆ. ಈಚಿನ ಸಂತೋಷದ ಸಂಗತಿ ಎಂದರೆ ಸಾಕಷ್ಟು ನಿಖರತೆಯೊಂದಿಗೆ ಕನ್ನಡ ಓಸಿಆರ್ ಸೌಲಭ್ಯ ಗೂಗಲ್ ಡಾಕ್ಸ್‌ನಲ್ಲಿ ಲಭ್ಯವಿದೆ. ಈಗ ಈ ಸೌಲಭ್ಯ ಆನ್ ಲೈನ್‌ನಲ್ಲಿ ಮಾತ್ರ ಲಭ್ಯವಿದೆ. ಇದು ಆಫ್ ಲೈನ್ ಮುಂದೊಂದು ದಿನ ಆದರೆ ಅದ್ಭುತವಾದೀತು. 

ಓಸಿಆರ್ ತತ್ರಾಂಶ ಕೆಲವು ಯೂರೋಪಿನ ಭಾಷೆಗಳಿಗೆ ಮೊದಮೊದಲು ಲಭ್ಯವಿದ್ದು, ಇದು ಭಾರತೀಯ ಭಾಷೆಗಳಿಗೆ ದೊರಕಲು ಅಸಾಧ್ಯವೆಂದಿದ್ದ ಕಾಲವೊಂದಿತ್ತು. ಗಮನಿಸಬೇಕಾದ ಸಂಗತಿಯೆಂದರೆ ಗೂಗಲ್ ಡಾಕ್ಸ್‌ ಓಸಿಆರ್‌ನಲ್ಲಿ ಸುಮಾರು 230 ಭಾಷೆಗಳಿದ್ದು ಭಾರತದ ಅನೇಕ ಭಾಷೆಗಳು ಸೇರಿವೆ.  ಗೂಗಲ್‌ ಡಾಕ್ಸ್‌ ಬಹು ಮುಖ ಶಕ್ತಿಯೆಂದರೆ ಯಾವ ಭಾಷೆಯೆಂದು ಅದೇ ಗುರುತಿಸಿ ಆ ಭಾಷೆಯ ಓಸಿಆರ್‌ ಕೆಲಸ ಮಾಡುತ್ತದೆ.  [ಹೀಗಾಗಿ ಕೆಲವೊಮ್ಮೆ ನಿಮ್ಮ ಇಳುವರಿಯಲ್ಲಿ ಬೇರೆ ಭಾಷೆಯ ಲಿಪಿ ಕಾಣಬಹುದು-ಇದು ಲಿಪಿಗಳ ಸಾಮ್ಯತೆ ಮತ್ತು/ಅಥವಾ bug(?) ಕಾರಣಕ್ಕಾಗಿ ಇರಬಹುದು].  

ಅನೇಕ ಪ್ರಯತ್ನಗಳು ಅಷ್ಟು ಫಲಕಾರಿಯಾಗಿರಲಿಲ್ಲ. ಈಗ ಅರುಣೋದಯವಾಯಿತು. ನೀವು ಇದನ್ನು ಪ್ರಯತ್ನಿಸಿ ಟೈಪಿಂಗ್ ಶ್ರಮವನ್ನು ಉಳಿಸಬಹುದು.

ಯಾವುದೇ Gmail ಬಳಕೆದಾರರು ಜಿ ಡ್ರೈವಿನಲ್ಲಿ ತನ್ನ ಫೈಲ್ಗಳನ್ನು ಸಂಗ್ರಹಿಸಲು ಸೌಲಭ್ಯವಿದೆ.  ಜಿ ಡ್ರೈವಿನಲ್ಲಿರುವ PNG, jpg ಮತ್ತು ಪಿಡಿಎಫ್ ಫೈಲ್‌ಗಳನ್ನು 'Google ಡಾಕ್ಸ್' ಬಳಸಿ ತೆರೆದರೆ  ಒಂದು ಚಿತ್ರವಾಗಿ ಮತ್ತು ಅದರ ತಳದಲ್ಲಿ ಪಠ್ಯವಾಗಿ ತೆರೆಯುತ್ತದೆ.  Google ಡಾಕ್ಸ್‌ನಲ್ಲಿ ಹೆಚ್ಚಿನ ಭಾಷೆಗಳ (ಕನ್ನಡವೂ ಸೇರಿ) ಓಸಿಆರ್ ತತ್ರಾಂಶವನ್ನು ಈಚೆಗೆ ಅಳವಡಿಸಿಕೊಂಡಿದ್ದರಿಂದ ಇದು ಸಾಧ್ಯವಾಗಿದೆ.

ಮೂಲತಃ ನೀವು ಮೊದಲು Google ಡ್ರೈವ್ ನಂತರ Google ಡಾಕ್ಸ್ ಬಳಸಬೇಕು.. ನೀವು Google ID. ಬಳಸಿಕೊಂಡು ಇದನ್ನು ಪಡೆಯಬಹುದು.  Gmail ಪುಟದಲ್ಲಿ ಒಂಬತ್ತು ಬ್ಲಾಕ್ಸ್(ಮೂರು ಸಾಲುಗಳಲ್ಲಿ ಮೂರು ಬ್ಲಾಕ್‌ಗಳು) ಇರುವ ಐಕಾನ್ ಕ್ಲಿಕ್‌ ಮಾಡಿ Google ಡ್ರೈವ್  ತೆರೆದುಕೊಳ್ಳಿ. 

1.ನೀವು ಓಸಿಆರ್ ಬಯಸುವ ಯಾವುದೇ ಚಿತ್ರ ಕಡತ ( PNG ಮತ್ತು JPEGಮಾತ್ರ) Upload ಮಾಡಿ. PDF ಕಡರವಾದರೂ ಸರಿ.  ("mydrive ಫೋಲ್ಡರ್" ಹೋಗಿ "MyDrive" ಕ್ಲಿಕ್‌ ಮಾಡಿದರೆ   "ಫೈಲ್ಗಳನ್ನು ಅಪ್ಲೋಡ್"/ "ಇಮೇಜ್ ಫೈಲ್" ಮೇಲೆ ಕ್ಲಿಕ್ ಮಾಡಿ  ಕಡತ ಅಪ್ಲೋಡ್ ಮಾಡಿ)
2.  ಅಪ್ಲೋಡ್ ಮಾಡಿದ ಚಿತ್ರವನ್ನು  ರೈಟ್ ಕ್ಲಿಕ್ ಮಾಡಿ  "Google ಡಾಕ್ಸ್" ಅನ್ನ ಫೈಲ್ ತೆರೆಯಲು ಆಯ್ಕೆ ಮಾಡಿ.
3.Google ಡಾಕ್ಸ್ ಬ್ರೌಸರ್ನಲ್ಲಿ ಚಿತ್ರ ಮತ್ತು ಕೆಳಗೆ ಪಠ್ಯ ನೋಡುತ್ತೀರಿ. ನಕಲಿಸಿ ಎಲ್ಲಿಬೇಕಾದರಲ್ಲಿ ಅಂಟಿಸಬಹುದು.
4.ನೀವು ಡಾಕ್ಯುಮೆಂಟ್ ಡೌನ್ಲೋಡ್ ಆಯ್ಕೆ ಮಾಡಿ   MS ವರ್ಡ್ ನಲ್ಲಿ ಡಾಕ್ ಸ್ವರೂಪಕ್ಕೆ ಮಾರ್ಪಾಡಾಗುತ್ತದೆ.

ನಿಖರತೆ ಇನ್ನೂ ಒಂದು ಸಮಸ್ಯೆಯಾಗಿದೆ ಮತ್ತು ಚಿತ್ರ / ಸ್ಕ್ಯಾನಿಂಗ್ ಉತ್ತಮ ವೇಳೆ ನಾವು ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಒಂದು ಮಿತಿಯನ್ನು Google ಡಾಕ್ಸ್ ಸಮಯದಲ್ಲಿ ಮಾತ್ರ 10  ಪುಟಗಳು ನಿರ್ವಹಿಸಲು ಮಾಡುತ್ತದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ನೋಡಿ

Monday, May 4, 2015

ಕಾಲ

ಕಾಲ

ನಮ್ಮ ಅಮ್ಮ ನನಗೆ ಶಾಲೆಗೆ ಹೋಗುವಾಗ ಹೊತ್ತಿಗೆ ಬಹಳ ಮುಂಚೆ ಹೊರಟರೆ "ಅಲ್ಲಿ ನೀನು ಕೊಠಡಿಯ ನೆಲಗುಡಿಸಲು ಹೋಗುತ್ತೀಯಾ?" ಎಂದು ತಡೆಯುತ್ತಿದ್ದರು. ಸ್ವಲ್ಪ ಮುಂಚೆ ಹೋಗಿ ತರಗತಿ ಪ್ರಾರಂಭವಾಗುವುದಕ್ಕೆ ಮೊದಲು ಗೆಳೆಯರೊಡನೆ ಮಾತೋ ಅಟವೋ ಇಟ್ಟುಕೊಳ್ಳುವ ಆಸೆ. ಈಗ ಅನಿಸುತ್ತಿದೆ, ನಮ್ಮ ಅಮ್ಮ ಹಾಗೆ ಅನ್ನುತ್ತಿದ್ದ ಕಾರಣವೇ ಬೇರೆ. ಅವಳಿಗೆ ನಮಗೆ ಊಟ ತಯಾರುಮಾಡಲು ಅವಳು ಆತುರ ಪಡಬೇಕಾಗಿತ್ತೇನೋ! ಅದರ ಸಂಬಂಧ ಅವಳಿಗೆ ಏನೇನು ಅಡಚಣೆಗಳಿದ್ದವೋ ನಮಗೆ ಗೊತ್ತಿರಲಿಲ್ಲ.

ಈಗ ನಾನು ನನ್ನ ಹೆಂಡತಿಯನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಲು ಮುಂಚೆಯೇ ತಿಳಸಿದೆ ಎಂದಿಟ್ಟುಕೊಳ್ಳಿ. ಅವಳು ಹಾಕುವ ಮೊದಲ ಕಟ್ಟು: ನೀವು ನನ್ನನ್ನು ಬೇಗ ಹೊರಡಲು ಅವಸರಿಸಬಾರದು. ಎಲ್ಲರಿಗಿಂತ ಮೊದಲು ಹೋಗಿ ನಾವು ಅಲ್ಲಿ ಏನು ಮಾಡಬೇಕಾಗಿದೆ?

ಈ ತರಹದ ಸಮಸ್ಯೆಗಳು ನಮ್ಮ ಭಾರತದ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಕಾಣುತ್ತಿರುವುದರಿಂದ ನಮ್ಮ ಕಾಲವನ್ನು ಅನುಸರಿಸದೇ ಇರುವ ನಡುವಳಿಕೆ 'ಇಂಡಿಯನ್ ಸ್ಟಾಂಡರ್ಡ್ ಟೈಮ್‌' ಎಂಬ ಕುಹಕ ನಾಮಧೇಯವಿದೆ.  

ನಾವು ನಿಧಾನಗತಿಯವರು; ಯಾವುದಕ್ಕೂ ಆತುರವಾಗಲೀ, ಆತಂಕವಾಗಲೀ, ಅಂಟುಕೊಡವರಾಗಲೀ ಇಲ್ಲ ಎನ್ನು ಖ್ಯಾತಿಗಳಿಸಿದ್ದೇವೆ. ನಮ್ಮ ತಂದೆಯವರ ಕಾಲದಲ್ಲಿ ಮೈಸೂರು ಸರ್ಕಾರದ ಕಛೇರಿಗಳು ಅಧಿಕೃತವಾಗಿ 11 ಗಂಟೆಯಿಂದ 5 ಗಂಟೆ ವರೆಗೆ ಇರುತ್ತಿದ್ದವು. ಈಗ ನೋಡಿ ಕರ್ನಾಟಕ ಸರ್ಕಾರದ ಕಛೇರಿಗಳು 10 ರಿಂದ 5.30 ವರೆಗೆ ನಡೆಯುತ್ತವೆ. ಆಗ ಕೆಲಸವು ಕಡಿಮೆ ಇದ್ದವೆಂತಲೋ ಅಥವಾ ಸಂಬಳ ಕಡಿಮೆ ಇತ್ತು ಎಂತಲೋ ಕಛೇರಿಯ ಕೆಲಸದ ಒಟ್ಟು ಸಮಯ ಸೀಮಿತವಾಗಿತ್ತು. ಈಗ ಕೆಲಸ, ಸಂಬಳ ಎರಡೂ ಹಿಗ್ಗಿವೆ. ನಾವೂ ಈಗ ನಿಧಾನಗತಿಯವರಲ್ಲ ಅಲ್ಲವೆ. ಕಛೇರಿಗೆ ತಡವಾಗಿ ಬಂದ ಒಬ್ಬ ನೌಕರನು ಕೊಟ್ಟ ವಿವರಣೆಗೆ ಮೇಲಧಿಕಾರಿ ಹೇಳದ್ದೇನು ಗೊತ್ತೇ? ಇರುವ ಎಲ್ಲಾ ಅಡಚಣೆಗಳನ್ನೂ ಗಮನದಲ್ಲಿಟ್ಟುಕೊಂಡು ಕಛೇರಿ ತಲುವ ಸಮಯಕ್ಕೆ ಸರಿಯಾಗಿ ತಲುವಹಾಗೆ ನಿಮ್ಮ ವೇಳಾಪಟ್ಟಿ ಬದಲಿಸಿಕೊಳ್ಳಿ. ಹೌದು ನಮಗೆ ಗುರಿ ನಿಶ್ಚಯಿಸಿಕೊಳ್ಳುವ ಮನಸ್ಸು ಬೇಕು! ಯಾವುದನ್ನೂ ಆದರೆ ಈಚೆಗೆ ನಮ್ಮ ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿ ಕಾಲವನ್ನು ಹರಣಮಾಡುವ ಹಾಗೇ ಇಲ್ಲ. ಮಾಡಿದರೆ ಯಾವುದಕ್ಕೋ ಅಗತ್ಯ ಬಿಟ್ಟುಹೋಗುತ್ತದೆ. ಹಾಗಾಗಿ ಕಾಲಹರಣದ ಪ್ರವೃತ್ತಿಗಳು ಇಳಿಮುಖವಾಗುತ್ತಿವೆ.

ಕಾಲ ಯಾರಿಗೂ ಕಾಯುವುದು ಇಲ್ಲ. ಅದು ಯಾವಾಗಲೂ ಮುಂದೆ ಮುಂದೆ ಹೋಗುತ್ತಲೇ ಇರುತ್ತದೆ. ಹೀಗಾಗಿ ಕಳೆದು ಹೋದದ್ದು ಹೋಗಿಯೇ ಬಿಟ್ಟಿತು ಎಂಬುದನ್ನು ತಿಳಿಯಬೇಕು.   

Tuesday, February 24, 2015

ಚಿಲುಮೆ ಯ ಹಳೆಯ ಪೋಸ್ಟ್‌ಗಳು ಇಲ್ಲಿವೆ