Saturday, September 26, 2015

ಕಿರು ಚಿತ್ರದಲ್ಲಿ ಕಿರು......

ನಾಗತಿಹಳ್ಳಿ ಚಂದ್ರಶೇಖರ್‌ ಅವರ ಒಂದು ಕಿರುಚಿತ್ರದಲ್ಲಿ ಉಪವನಗಳಲ್ಲಿ ಹಿರಿಯನಾಗರೀಕರ ತಂಡದ ನಗೆಕ್ಲಬ್ಬುಗಳ ತುಣುಕು ಸಂಯೋಜಿಸಲು ಬನಶಂಕರಿ ಎರಡನೇ ಹಂತದ "ಜ್ಞಾನ ಜ್ಯೋತಿ" ಸಂಸ್ಥೆಗೆ ಕೋರಿಕೆ ಬಂತು. ಅದನ್ನು ನಡೆಸಿಕೊಡಲು ಒಪ್ಪಿ ಒಂದಷ್ಟು ಉತ್ಸಾಹಿ 'ಹಿರಿಯ-ತರುಣ'ರನ್ನು ಕಲೆಹಾಕಿ, ಅವರೆಲ್ಲರೂ ಒಂದು ಕಡೆ ಗುಂಪಾಗಿ ಸೇರಿದೆವು. ಕಿರುಚಿತ್ರದ ನಿರ್ವಾಹಕರು ನಮ್ಮನ್ನೆಲ್ಲಾ ಸ್ಟುಡಿಯೋಗೆ ವಾಹನದಲ್ಲಿ ಕರೆದೊಯ್ದರು. ನಾನೂ ಆ ಗುಂಪಿಗೆ ಸೇರಿದ್ದೆ. ಮೊದಲು ಏನನ್ನು ಹೇಗೆ ಮಾಡಬೇಕೆಂದು ತೋರಿಸುತ್ತಿದ್ದರು; ಅದರಂತೆ ನಾವು ಮಾಡಬೇಕು. ಕ್ಯಾಮರಾದ ದೃಷ್ಟಿಗೆ ಬೀಳಲು ಎಲ್ಲರೂ ಕಸರತ್ತು ನಡೆಸುತ್ತಿದ್ದರು. ಏಕಪ್ಪಾ ಇಷ್ಟೊಂದು ಕಸರತ್ತು ಅಂದರೆ ಆ ಚಿತ್ರೀಕರಣಕ್ಕೆ ಒಂದೇ ಕ್ಯಾಮರ ಉಪಯೋಗಿಸಲು ಯೋಜಿಸಿದ್ದರು. ಒಂದು ದೃಶ್ಯದಲ್ಲಿ ಹೆಜ್ಜೆಯಾಗಿ ಕ್ಯಾಮರಾ ಕಡೆಗೆ ಮುಂದುವರಿಯಬೇಕಾಗಿತ್ತು. ಆಗ ಅಕ್ಕಪಕ್ಕದವರ ತಳ್ಳುವಿಕೆಯಿಂದ ಒಬ್ಬಿಬ್ಬರು ಬಿದ್ದದ್ದೂ ಉಂಟು.

ಮೊದಲೇ ಟ್ರ್ಯಾಕ್‌ ಷೂ ಹಾಕಿಕೊಂಡು ಬರಲು ಹೇಳಿದ್ದರು. ಒಬ್ಬ ಹಿರಿಯರು ಸಾಧಾರಣ ಷೂ ಹಾಕಿ ಬಂದಿದ್ದರು. ಅದನ್ನು ನೋಡಿ ಡೈರೆಕ್ಟರ್‌ 'ಏನ್ರೀ ಆಫೀಸಿಗೆ ಹೋಗುವ ಹಾಗೆ ಪಾರ್ಕಿಗೆ ಬಂದಿದ್ದೀರಿ' ಅಂದು ಬಿಡುವುದೇ? ಅವರು ಬೇಗ ಹೋಗಿ ತಂದಿದ್ದ ಟ್ರ್ಯಾಕ್‌ ಷೂಗೆ ಬದಲಾಯಿಸಿದರು.

ಸಾಯಂಕಾಲದ ವರೆಗೆ ಏನೋನೋ ಮಾಡಲು ಹೇಳಿ ಚಿತ್ರೀಕರಿಸಿಕೊಂಡರು. ತಿಂಡಿ ತೀರ್ಥ ಎಲ್ಲಾ ಕೊಟ್ಟರು; ವಾಪಸ್ಸು ಹೊರಟಿದ್ದ ಜಾಗಕ್ಕೆ ತಂದು ಬಿಟ್ಟರು. ಯಾವತ್ತು ಆ ಧಾರಾವಾಹಿ ಪ್ರಾರಂಭವಾಗುತ್ತೆ ಅಂತನೂ ನಮಗೆ ತಿಳಿದಿರಲಿಲ್ಲ. ನಾವಿರುವ ದೃಶ್ಯ ಎಂದು ಟಿವಿಲಿ ಬರುತ್ತೆ ಅಂತಲೂ ಗೊತ್ತಿರಲಿಲ್ಲ. ದಿನವೂ ಅ ಧಾರಾವಾಹಿಗಾಗಿ ಟಿವಿಯನ್ನು ನೋಡಿದ್ದೇ ನೋಡಿದ್ದು! ಇರಲಿ ಅದನ್ನು ರಿಕಾರ್ಡ್‌ಮಾಡಲು ಬೇಕಾದ ಸಲಕರಣೆ ಹೊಂದಿಸಲು ಸ್ವಲ್ಪ ಹಣವೂ ಕೈಬಿಟ್ಟಿತು.

ಅಂತೂ ಇಂತು ಎಲ್ಲಾ ಆದಮೇಲೆ ದೃಶ್ಯದ ತುಣುಕು ನೋಡಿದವರು ತಾವು ಪರದೆಯ ಮೇಲೆ ಸರಿಯಾಗಿ ಕಾಣದಿದ್ದಾಗ ಇದ್ದ ಆಸೆಗಳಿಗೆ ಎಳ್ಳು ನೀರು ಬಿಟ್ಟು ಬರೀ ನಮ್ಮ ಬೆನ್ನು ಬಿದ್ದಿದೆ ಅಂದುಕೊಂಡಿರಬೇಕು! ಅಂತೂ ಇಂತೂ ನಾವೂ ಟಿವಿಪರದೆಯಲ್ಲಿ 


ಕಾಣಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಒಂದು ಅವಕಾಶ!
ಆ ದೃಶ್ಯ ನೋಡಿ ನೀವೂ ಅನಂದಿಸಿರಿ.
  

No comments: