ನಾನು ಈ ಬ್ಲಾಗಿನಲ್ಲಿ ಕನ್ನಡಸಾಹಿತ್ಯ ಡಾಟ್ ಕಾಮ್ ನವರಿಗೆ ಕನ್ನಡದ "ಶಾಮಣ್ಣ" ಕಾದಂಬರಿಯನ್ನು ಡಿಜಿಟಲೈಸ್ ಮಾಡುವುದಕ್ಕೆ ಶ್ರಮದಾನ ಮಾಡಿದ್ದರ ವಿಷಯ ಪ್ರಸ್ತಾಪಿಸಿದ್ದೆ. ಈ ಸಂಸ್ಥೆಯವರ ಸೋದರ ಸಂಸ್ಥೆಯಾದ ಸಂವಾದ ಡಾಟ್ ಕಾಮ್ ನವರು ೯ನೇ ಆಗಷ್ಟ್ ಕನ್ನಡ ಚಲನ ಚಿತ್ರ "ಕಬಡ್ಡಿ" ಯ ಪ್ರದರ್ಶನ ಮತ್ತು ಚಿತ್ರದ ತಂಡದವರೊಡನೆ ಸಂವಾದವನ್ನು ಏರ್ಪಡಿಸಿದ್ದರು. ನಾನು ಮತ್ತು ನನ್ನ ಸಂಗಾತಿ ಆ ಕಾರ್ಯಕ್ರಮಕ್ಕೆ ಹೋಗಿದ್ದೆವು. ನನಗೆ ಮುಂಚೆ ತಿಳಿಸದೆಯೇ ನನ್ನ ಪರಿಶ್ರಮವನ್ನು ಸಾರ್ವತ್ರಿಕವಾಗಿ ಸನ್ಮಾನಿಸಲು ಆ ವೇದಿಕೆಯನ್ನು ಉಪಯೋಗಿಸಿ ಕೊಂಡರು. ೫೭೭ ಪುಟಗಳನ್ನು ಕೀ-ಇನ್ ಮಾಡಲು ಒಂದು ಪುಟಕ್ಕೆ ಸುಮಾರು ೫೦೦೦ ಸಲಿ ಕೀಲಿ ಒತ್ತಬೇಕಾಗಿರುವುದನ್ನು ಹೇಳಿ ನನ್ನ ಈ ವಯಸ್ಸಿನಲ್ಲಿ ಈ ಕೆಲಸುವು ಅದ್ಭುತವೆಂದು ಕನ್ನಡಸಾಜಿತ್ಯ ಡಾಟ್ ಕಾಮ್ ನ ಸಂಪಾದಕರಾದ ಶೇಖರಪೂರ್ಣರವರು ಸಭೆಗೆ ನನ್ನ ಪರಿಚಯಿಸಿದರು. ಇದೆಲ್ಲ ನನಗೆ ಹಿಂದಿನ ದಿನಗಳ ನೆನಪು ತಂದುಕೊಟ್ಟಿತು. ಕೊಂಚ ಮುಜುಗರ, ಕೊಂಚ ತೃಪ್ತಿ, ಕೊಂಚ ಎದೆ ಉಬ್ಬಿದಂತೆ ಆಯಿತು. ನಾನು ಉತ್ತರ ರೂಪವಾಗಿ ಆ ಕಾರ್ಯದಲ್ಲಿ ತೊಡಗಿದ್ದಾಗ ಓದುವಾಗ ಸಾಧ್ಯವಿರುವುದಕ್ಕಿಂತಲೂ ಕೀ-ಇನ್ ಮಾಡುವಾಗ ಹೆಚ್ಚು ಹೆಚ್ಚು ಗಮನವಿಡಬೇಕಾದದ್ದರಿಂದ ಶಾಮಣ್ಣ ಕಾದಂಬರಿಯನ್ನು ಬಹಳವಾಗಿ ಸವಿದೆನೆಂದು (ಇದು ನಿಜ) ಹೇಳಿದೆ.
ಆ ಸಂದರ್ಭದಲ್ಲಿ ತೆಗೆದ ಚಿತ್ರಗಳನ್ನು ನೆನಪಿಗೋಸ್ಕರ ಇಲ್ಲಿ ಹಾಕಿದ್ದೇನೆ.
೧೫-೮-೫೦
9 years ago
4 comments:
Congratulations, Anna! It is very well-deserved.
Congrats! I'm glad they recognised your time & effort.
That's great! So, so so, proud of you!! Congrats.
ನಿಮ್ಮ ಸಾಹಸ ಮುಂದುವರೆಯಲಿ...ಹರಿವ ನೀರಿನಂತೆ...ಸುರಿವ ಬೆಳಕಿನಂತೆ...ತಡೆಯಿಲ್ಲ...!
Post a Comment