Monday, October 25, 2010

ಟು ಬೈ ಥ್ರೀ ಕಾಫಿ

ನಮ್ಮ ಮನೆ ಹತ್ತಿರ ಒಂದು ಕಾಫಿ ಹೋಟೆಲ್ ಇದೆ. ಅದರ ಹೆಸರು ಟು ಬೈ ಥ್ರೀ ಕಾಫಿ. ಇದೇನಪ್ಪ ವಿಶೇಷ ಅಂದರೆ ದೊಡ್ಡ ಹೋಟೆಲ್‍ಗಳಲ್ಲಿ ಭಿನ್ನಾಂಶದ ಕಾಫಿ ಅಂದರೇನು, ಅವಮಾನದ ಸಂಗತಿ ಅಲ್ಲವೇ?
ಎಲ್ಲರಿಗೂ ತಿಳಿದದ್ದು ಹಿಂದೆ ಬೆಂಗಳೂರನ್ನು ’ಬೈ ೨ ಕಾಫಿ’ ಅಂತಾಲೇ ಅಣಕಿಸುತ್ತಿದ್ದರು. ಅವರಿಗೇನು ಗೊತ್ತಿತ್ತು ಬೈ ೨ ಕಾಫಿ ದಿನಕ್ಕೆ ಇಪ್ಪತ್ತು ಸಲ ಜನ ಕುಡಿಯುತ್ತಿದ್ದರು; ಅಂದರೆ ಒಟ್ಟು ಹತ್ತು ಕಪ್ಪ್ ಆಗುತ್ತಿತ್ತು. ಚೈನ್ ಡ್ರಿಂಕಿಂಗ್ ಚೈನ್ ಸ್ಮೋಕಿಂಗ್ ತರಹ. ಏಕೆ ಚೈನ್ ಡ್ರಿಂಕಿಂಗ್ ಬೇಕಿತ್ತು ಅಂದರೆ ಆಗ ಬೆಂಗಳೂರಿನಲ್ಲಿ ಅಷ್ಟು ಚಳಿ ಇರುತ್ತಿತ್ತು.

ಇದಕ್ಕೆ ಇನ್ನೊಂದು ಮುಖ ಇದೆ. ಬೆಂಗಳೂರು ಹಿಂದೆ ಐ.ಟಿ. ಬೂಮ್‍ಗಿಂತ ಮೊದಲು, ಬಡವರ ಊರಾಗಿತ್ತು; ನೈಸರ್ಗಿಕ ಹವಾನಿಯಂತ್ರಿತ ನಗರ ಹಾಗೂ ವಿಶ್ರಾಂತಿಗರ ಸ್ಚ್ವರ್ಗ. ಕೈಯಲ್ಲಿ ಕಾಸು ಕಡಿಮೆ, ಚಳಿ, ಮೈ ಬಿಸಿಮಾಡಿಕೊಳ್ಳಲು ಕಾಫಿ ಬೇಕು, ’ಬೈ ೨’ ಸಾಕಾಗ್ತಾ ಇತ್ತು. ಆಗಲೂ ಕೆಲವು ಹೋಟಲುಗಳಲ್ಲಿ ’ಎಕ್ಸ್ಟ್ರಾ ಕಪ್’ ಕೊಡುತ್ತಿರಲಿಲ್ಲ. ಏನಾಗ ಆ ಹೊಟೆಲ್ಗಳನ್ನು ಬಿಟ್ಟರಾಯಿತು ಎನ್ನುತ್ತಿದ್ದರು ಜನ.

ಆ ಅಡ್ಡ ಹೆಸರನ್ನೇ ಈಗ ಜಾಹಿರಾತಾಗಿ ಬಳೆಸಲು ಜಾಣ್ಮೆ ಉಪಯೋಗಿಸಿದ್ದಾರೆ ಈ "೨/೩ ಕಾಫಿ" ಹೋಟೆಲ್‍ನೋರು.

No comments: