Monday, May 4, 2015

ಕಾಲ

ಕಾಲ

ನಮ್ಮ ಅಮ್ಮ ನನಗೆ ಶಾಲೆಗೆ ಹೋಗುವಾಗ ಹೊತ್ತಿಗೆ ಬಹಳ ಮುಂಚೆ ಹೊರಟರೆ "ಅಲ್ಲಿ ನೀನು ಕೊಠಡಿಯ ನೆಲಗುಡಿಸಲು ಹೋಗುತ್ತೀಯಾ?" ಎಂದು ತಡೆಯುತ್ತಿದ್ದರು. ಸ್ವಲ್ಪ ಮುಂಚೆ ಹೋಗಿ ತರಗತಿ ಪ್ರಾರಂಭವಾಗುವುದಕ್ಕೆ ಮೊದಲು ಗೆಳೆಯರೊಡನೆ ಮಾತೋ ಅಟವೋ ಇಟ್ಟುಕೊಳ್ಳುವ ಆಸೆ. ಈಗ ಅನಿಸುತ್ತಿದೆ, ನಮ್ಮ ಅಮ್ಮ ಹಾಗೆ ಅನ್ನುತ್ತಿದ್ದ ಕಾರಣವೇ ಬೇರೆ. ಅವಳಿಗೆ ನಮಗೆ ಊಟ ತಯಾರುಮಾಡಲು ಅವಳು ಆತುರ ಪಡಬೇಕಾಗಿತ್ತೇನೋ! ಅದರ ಸಂಬಂಧ ಅವಳಿಗೆ ಏನೇನು ಅಡಚಣೆಗಳಿದ್ದವೋ ನಮಗೆ ಗೊತ್ತಿರಲಿಲ್ಲ.

ಈಗ ನಾನು ನನ್ನ ಹೆಂಡತಿಯನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಲು ಮುಂಚೆಯೇ ತಿಳಸಿದೆ ಎಂದಿಟ್ಟುಕೊಳ್ಳಿ. ಅವಳು ಹಾಕುವ ಮೊದಲ ಕಟ್ಟು: ನೀವು ನನ್ನನ್ನು ಬೇಗ ಹೊರಡಲು ಅವಸರಿಸಬಾರದು. ಎಲ್ಲರಿಗಿಂತ ಮೊದಲು ಹೋಗಿ ನಾವು ಅಲ್ಲಿ ಏನು ಮಾಡಬೇಕಾಗಿದೆ?

ಈ ತರಹದ ಸಮಸ್ಯೆಗಳು ನಮ್ಮ ಭಾರತದ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಕಾಣುತ್ತಿರುವುದರಿಂದ ನಮ್ಮ ಕಾಲವನ್ನು ಅನುಸರಿಸದೇ ಇರುವ ನಡುವಳಿಕೆ 'ಇಂಡಿಯನ್ ಸ್ಟಾಂಡರ್ಡ್ ಟೈಮ್‌' ಎಂಬ ಕುಹಕ ನಾಮಧೇಯವಿದೆ.  

ನಾವು ನಿಧಾನಗತಿಯವರು; ಯಾವುದಕ್ಕೂ ಆತುರವಾಗಲೀ, ಆತಂಕವಾಗಲೀ, ಅಂಟುಕೊಡವರಾಗಲೀ ಇಲ್ಲ ಎನ್ನು ಖ್ಯಾತಿಗಳಿಸಿದ್ದೇವೆ. ನಮ್ಮ ತಂದೆಯವರ ಕಾಲದಲ್ಲಿ ಮೈಸೂರು ಸರ್ಕಾರದ ಕಛೇರಿಗಳು ಅಧಿಕೃತವಾಗಿ 11 ಗಂಟೆಯಿಂದ 5 ಗಂಟೆ ವರೆಗೆ ಇರುತ್ತಿದ್ದವು. ಈಗ ನೋಡಿ ಕರ್ನಾಟಕ ಸರ್ಕಾರದ ಕಛೇರಿಗಳು 10 ರಿಂದ 5.30 ವರೆಗೆ ನಡೆಯುತ್ತವೆ. ಆಗ ಕೆಲಸವು ಕಡಿಮೆ ಇದ್ದವೆಂತಲೋ ಅಥವಾ ಸಂಬಳ ಕಡಿಮೆ ಇತ್ತು ಎಂತಲೋ ಕಛೇರಿಯ ಕೆಲಸದ ಒಟ್ಟು ಸಮಯ ಸೀಮಿತವಾಗಿತ್ತು. ಈಗ ಕೆಲಸ, ಸಂಬಳ ಎರಡೂ ಹಿಗ್ಗಿವೆ. ನಾವೂ ಈಗ ನಿಧಾನಗತಿಯವರಲ್ಲ ಅಲ್ಲವೆ. ಕಛೇರಿಗೆ ತಡವಾಗಿ ಬಂದ ಒಬ್ಬ ನೌಕರನು ಕೊಟ್ಟ ವಿವರಣೆಗೆ ಮೇಲಧಿಕಾರಿ ಹೇಳದ್ದೇನು ಗೊತ್ತೇ? ಇರುವ ಎಲ್ಲಾ ಅಡಚಣೆಗಳನ್ನೂ ಗಮನದಲ್ಲಿಟ್ಟುಕೊಂಡು ಕಛೇರಿ ತಲುವ ಸಮಯಕ್ಕೆ ಸರಿಯಾಗಿ ತಲುವಹಾಗೆ ನಿಮ್ಮ ವೇಳಾಪಟ್ಟಿ ಬದಲಿಸಿಕೊಳ್ಳಿ. ಹೌದು ನಮಗೆ ಗುರಿ ನಿಶ್ಚಯಿಸಿಕೊಳ್ಳುವ ಮನಸ್ಸು ಬೇಕು! ಯಾವುದನ್ನೂ ಆದರೆ ಈಚೆಗೆ ನಮ್ಮ ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿ ಕಾಲವನ್ನು ಹರಣಮಾಡುವ ಹಾಗೇ ಇಲ್ಲ. ಮಾಡಿದರೆ ಯಾವುದಕ್ಕೋ ಅಗತ್ಯ ಬಿಟ್ಟುಹೋಗುತ್ತದೆ. ಹಾಗಾಗಿ ಕಾಲಹರಣದ ಪ್ರವೃತ್ತಿಗಳು ಇಳಿಮುಖವಾಗುತ್ತಿವೆ.

ಕಾಲ ಯಾರಿಗೂ ಕಾಯುವುದು ಇಲ್ಲ. ಅದು ಯಾವಾಗಲೂ ಮುಂದೆ ಮುಂದೆ ಹೋಗುತ್ತಲೇ ಇರುತ್ತದೆ. ಹೀಗಾಗಿ ಕಳೆದು ಹೋದದ್ದು ಹೋಗಿಯೇ ಬಿಟ್ಟಿತು ಎಂಬುದನ್ನು ತಿಳಿಯಬೇಕು.   

No comments: