Friday, April 11, 2008

ನಮಗೂ ದೊಡ್ಡವರಿಗೂ ನೆಂಟು ಇದೆ!

ನಮ್ಮ ಗೀಳು ಏನೆಂದರೆ ನಮಗೂ ದೊಡ್ದವರಿಗೂ ನೆಂಟು ಇದೆ ಎಂದು ಹೇಳಿಕೊಳ್ಳುವುದು. ಒಂದಾನೊಂದು ಕಾಲದಲ್ಲಿ ಸಿನಿಮಾ ನಟಿ ವೈಜಯಂತಿಮಾಲ ಕನ್ನಡದವಳೆಂದು ಹೇಳಿಕೊಳ್ಳುತ್ತಿದ್ದೆವು. ಈಗ ಐಶ್ವರ್ಯ ರ‍ಯ್ ಕನ್ನಡವಳೆಂದು ಹೇಳಿಕೊಳ್ಳುತ್ತಿದ್ದೇವೆ. ಈ ಇಬ್ಬರು ಕನ್ನಡಕ್ಕೆ ಕೊಟ್ಟಿದ್ದೇನು? ಕೈ! ವೈಜಯಂತಿಮಾಲಳನ್ನು ಕನ್ನಡ ಸಿನಿಮ ಒಂದರಲ್ಲಿ ನೋಡುವ ನಮ್ಮ ಹಂಬಲ ನೆರವೇರಲೇ ಇಲ್ಲ. ಐಶ್ವರ್ಯ ರ‍ಯ್ ತನಗೆ ಕನ್ನದ ಬರುವುದಿಲ್ಲವೆಂದು ಹೇಳಿಕೊಂಡಿದ್ದಾಳೆ.
ಜಯಲಲಿತಳೂ- ಅವಳು ಮೈಸೂರಿನಲ್ಲಿ ಬಾಲ್ಯ ಕಳೆದಳೆಂದು ಸುದ್ದಿ ಇದ್ದಾಗ- ತನಗೂ ಕರ್ನಾಟಕಕ್ಕೂ ಸಂಬಂಧ ವಿಲ್ಲವೆಂದು ಹೇಳಿಕೊಂಡಿದ್ದಾಳೆ.
ಇರಲಿ ಪಾಕಿಸ್ತಾನದ ಅಧ್ಯಕ್ಷ ಮುಷರಫ್ ದೆಹಲಿಯಲ್ಲಿ ಹುಟ್ಟಿದವರಂತೆ. ಹೀಗೇ ಇನ್ನೂ ಕೆಲವು ಪ್ರಸಿದ್ಧ ಪುರುಷರಿಗೂ ಭಾರತದ ಸಂಬಂಧ ಹೇಳಿಕೊಂಡು ಆನಂದ ಪಟ್ಟಿದ್ದೇವೆ.
ಈಗ ಇದರ ಪಟ್ಟಿಗೆ ಇನ್ನೊಬ್ಬರು! ಅವರು ಯಾರು ಎಂದು ಕಂಡು ಹಿಡಿಯಲು ಇಲ್ಲಿ ಓದಿ

No comments: