Friday, April 11, 2008

"ಮಾಡಿದ್ದುಣ್ಣೊ ಮಹಾರಾಯ"

ಹಳೇ ಕಾಲದ ಮನೆಗಳ ಸೂರು ತೊಲೆ, ಗಳು, ಹೆಂಚು ಗಳಿಂದ ಕಟ್ಟುತ್ತಿದ್ದರು. ಅಂಥಹ ಮನೆಯಲ್ಲಿ ತೊಲೆ ಕೆಳಗೆ ಸಾಮಾನ್ಯವಾಗಿ ಮಲಗಿಕೊಳ್ಳುತ್ತಿರಲಿಲ್ಲ. ಅನಿವಾರ್ಯವಾಗಿ ಮಲಗಿಕೊಳ್ಳಬೇಕಾದಾಗಿ ಒಬ್ಬಾಕೆ ದೇವರ ಪ್ರಾರ್ಥನೆ ಮಾಡಿದ್ದು ಹೀಗೆ
"ತೊಲೆಯೇ ತೊಲೆಯೇ ನಾನೇ ಮರ, ನೀನೇ ಮನುಷ್ಯ, ಹಾವಿಗೆ ಹರನ ಆಣೆ, ಚೇಳಿಗೆ ಭೈರವನ ಆಣೆ, ಇರುವೆ ಎಂಭತ್ತುಕೋಟಿ ಜೀವರಾಶಿಗೂ ಬಿದ್ದ ಬಾಳಿ ಬಿಟ್ಟು ಇತ್ತಿತ್ತ ಬಂದರೆ ತಾಯಿಮುದ್ರವ್ವೆಯ ಪಾದದಾಣೆ; ಹರಾ ಎಂತ ಬಲದ ಮಗ್ಗಲ ಹೂಡಿದೆ, ಹರಿ ಅಂತ ಎಡದ ಮಗ್ಗಲ ಹೂಡಿದೆ, ಚಿತ್ತಹೋಗಿ ಅಚ್ಚುತನನ್ನು ಕೂಡಿತು, ಮನಹೋಗಿ ಮಾಧವನನ್ನು ಕೂಡಿತು, ನಾನು ಹೋಗಿ ಕಾಶೀ ವಿಶ್ವೇಶ್ವರನನ್ನು ಕೂಡಿದೆ. ಸ್ವಾಮಿ ನಂಜುಂಡೇಶ್ವರ, ತಾಯೆ ಚಾಮುಂಡೇಶ್ವರಿ, ಸಜ್ಜನಸಂಗ ಕೊಡು ದುರ್ಜನರ ದೂರತ್ತ ಇಡು ತಾಯೇ"
(ಪುಟ ೧೬೯ ಮಾಡಿದ್ದುಣ್ಣೊ ಮಹಾರಾಯ)

ಇದೇ ಪುಸ್ತಕದ ಮುನ್ನುಡಿಯಲ್ಲಿ ಗ್ರಂಥಕರ್ತರು ಹೇಳಿರುವುದೇನು......
"Official corruption and its momentous sequences, village faction and its evils, the Court of His Highness Krishnaraja Wodeyar III the late Maharaja of Mysore and his fabulous generosity, the court jester, the credulous villagers, the story of a chaste woman, Suttee, insanity condition of villages in olden times, treatment of a daughter-in-law by a mother-in-law, of a mother-in-law by a daughter-in-law, the village schoolmaster and his cruelty, his treatment by the pupils, his horrid ingratitude, a philosophic view of corporal punishment, its effect on the education of the rising generation, hypocrisy and its its secret misdeeds, a sincere and distorted description of genuine beauty, the meanest and the most reprehensible attempt to seduce ideal chastity, a nefarious practice of electrobiology, the indiscreet levity of a mad cap and the ludicrous portion of his conversation, the autobiography of a burglar, an awe inspiring incident on a cremation ground, a miracle worked by a wonderful sorcerer, and his unselfishness, other minor matters, and the moral tone intended to pervade from the beginning to the end: have all been treated in their proper places."

’ಮಾಡಿದ್ದುಣ್ಣೋ ಮಹಾರಾಯ’ ಕನ್ನದದ ಮೊದಲ ಕಾದಂಬರಿಯೆಂದು ಎಲ್ಲೋ ಓದಿದ ನೆನಪು. ಅದನ್ನು ಓದಲು ಅವಕಾಶ ಈಚೆಗೆ ಸಿಕ್ಕಿತು.
ಈ ಕೊಂಡಿಯಲ್ಲಿ ನಿಮಗೆ ಅವಕಾಶ ಸಿಕ್ಕರೆ ಓದಬಹುದು.

ಅದು ೧೯೧೫ ರಲ್ಲಿ ಪ್ರಕಟವಾಗಿದೆ. ಅದನ್ನು ಓದಿದ ಮೇಲೆ ಸುಮಾರು ನೂರುವರ್ಷಗಳ ಹಿಂದೆಯೂ ಸರಳ ಕನ್ನಡ ಬರವಣಿಗೆ ಇದ್ದಿದ್ದರ ಬಗ್ಗೆ ಆನಂದವಾಯಿತು. ಅದರಲ್ಲಿ ಪುಸ್ತಕದ ಶೈಲಿಯ ಭಾಷೆ ಇರಬಹುದು ಅಂದುಕೊಂಡಿದ್ದ ನನಗೆ ಆಶ್ಚರ್ಯವೂ ಆಯಿತು. ಆನಂದಿಸುವಿರೆಂದು ನಂಬಿಕೆ ನನಗಿದೆ

No comments: