ರುಮಾಲು, ಪೇಟ, turban.
ಈಚೆಗೆ ಬೆಂಗಳೂರಿನಲ್ಲಿ ಯಾರಿಗಾದರೂ ಸನ್ಮಾನ ಸಮಾರಂಭಗಳಲ್ಲಿ ಗೌರವ ಸಲ್ಲಿಸಬೇಕಾದರೆ ಮೈಸೂರು ಜರಿ ಪೇಟ ಅವರಿಗೆ ತೋಡಿಸಿ ಶಾಲು ಹೊದೆಸಿ ಫಲಪುಸ್ಪಗಳನ್ನು ನೀಡುತ್ತಾರೆ. ಮೈಸೂರು ಪೇಟ ಮದುವೆಗಂಡಿನ ಅಲಂಕಾರಕ್ಕೂ ಉಪಯೊಗಿಸುತ್ತಾರೆ. ಅದು ಅಲಂಕಾರ ಏಕೆ ಸಾಮಗ್ರಿಯಾಯಿತು ಅಂದರೆ ಅದರ ಸಾಮಾನ್ಯ ಉಪಯೋಗ ನಿಂತು ಹೋಯಿತು ಅಂತ ಅರ್ಥ. ಪೇಟ ಸಲ್ಪ ಜರ್ಬು ಆದರೆ ರುಮಾಲು ಸಾಧಾರಣ.
ಅದನ್ನು ಸರ್ವೇಸಾಧಾರಣ ಉಡುಪಿನ ಅಂಗವಾಗಿ ನಾನು ನೋಡಿದ್ದೇನೆ. ನಮ್ಮ ತಂದೆ ಪ್ರತಿದಿನ ಅವರ ನೌಕರಿಗೆ ಆಫೀಸಿಗೆ ಹೋಗುವಾಗ ರುಮಾಲು ಧರಿಸುತ್ತಿದ್ದರು. ೧೯೫೩-೫೫ರಲ್ಲಿ ನಾನು ಬೆಂಗಳುರಿನ ಸೆಂಟ್ರಲ್ ಕಾಲೇಜಿನಲ್ಲಿ ಅಭ್ಯಸಿಸುತ್ತಿದ್ದಾಗ ನಮ್ಮ ಕನ್ನಡ ಪ್ರೊಫೆಸರ್ ವಿ.ಸೀತಾರಮಯ್ಯನವರು ರುಮಾಲು ಧರಿಸುತ್ತಿದ್ದರು. ಹಿಂದಿನ ಪ್ರಮುಖ ಸಾಹಿತಿಗಳ ಭಾವಚಿತ್ರಗಳಲ್ಲಿ ರುಮಾಲು ಧರಿಸದವರು ಕಡಿಮೆ.
ಹಿಂದೆ ಉಪಾಧ್ಯಾಯರ ಉಡುಪಿನ ನಿಯಮದಲ್ಲಿ ರುಮಾಲು ಕಡ್ಡಾಯವಾಗಿತ್ತೆಂದು ಎಂಆರ್‍ಶ್ರೀ ಅವರ "ರಂಗಣ್ಣನ ಕನಸಿನ ದಿನಗಳು" ಗ್ರಂಥದಲ್ಲಿ ಅರ್ಥವತ್ತಾಗಿ ನಿರೂಪಿಸಲಾಗಿದೆ. (ಇದನ್ನು ನಾನು ಇಂಟರ್‍ಮೀಡಿಏಟ್‍ನಲ್ಲಿ ಅಭಸಿಸಿದ್ದೆ)
ಅದರ ಪಾಠವನ್ನು ಮತ್ತೊಂಮ್ಮೆ ಓದಿಕೊಂಡು ಆನಂದಿಸಿದೆ. (ಪುಟ ೪೭-೫೫).
ಆ ಪುಸ್ತಕವನ್ನು ಇಲ್ಲಿ ನೀವೂ ಓದಬಹುದು
ಈಗ ಈ ಪ್ರಸ್ತಾಪ ಏಕೆ ಮಾಡುತ್ತಿದ್ದೇನೆ ಅಂದರೆ ನಮ್ಮಲ್ಲಿ ಇನ್ನೊಂದು ಪದ್ಧತಿ ಬೆಳೆಯುತ್ತಿದೆ. ರಂಜಾನ್‍ಹಬ್ಬದಲ್ಲಿ ಅಧಿಕಾರದಲ್ಲಿರುವ ಮಹನೀಯರು ಮುಸ್ಲಿಂ ಬಾಂಧವರೊಡನೆ ಅವರು ಧರಿಸುವ ಉಡುಪನ್ನು ಹೋಲಿಸುವ ಉಡುಪನ್ನು ಧರಿಸಿ ಅವರೊಡನೆ ಪ್ರಾರ್ಥನೆ ಸಲ್ಲಿಸುವುದರ ಭಾವಚಿತ್ರಗಳನ್ನು ಪತ್ರಿಕೆಗಳಲ್ಲಿ ನೀವು ನೋಡಿರಬಹುದು. ಅದಕ್ಕೆ ಸಮಾನವಾದ ಒಂದು ಘಟನೆ ಅಮೇರಿಕದಲ್ಲಿ ನಡೆಯಿತು. ಅದರ ಸುದ್ದಿ ಇಲ್ಲಿ ಓದಿ.
ಅದರ ವಿವರಣೆ ಮತ್ತೊಮ್ಮೆ ಅಗತ್ಯವಿಲ್ಲ ಅಂದುಕೊಂಡಿದ್ದೇನೆ.
೧೫-೮-೫೦
9 years ago
No comments:
Post a Comment