Thursday, May 1, 2008

ಚಿತ್ರ ಕವನ

ಐವತ್ತು ವರ್ಷಗಳಿಗೂ ಹಿಂದೆ ಹಾಸ್ಯ ವಿಡಂಬನೆಗೆ ಮೀಸಲಾದ ಒಂದು ಕನ್ನಡ ಮಾಸ ಪತ್ರಿಕೆ "ಕೊರವಂಜಿ" ಇತ್ತು. ಅದನ್ನು ಓದಿದದ್ದವರಿಗೆ ಅದರ ಸೊಗಡು ಗೊತ್ತು. ಅದರಲ್ಲಿ ಪ್ರಕಟವಾಗಿದ್ದ ಒಂದು ಚುಟಕ ಕವನ ನನಗೆ ಪ್ರತಿ ದಿನ ನೆನಪಿಗೆ ಬರುತ್ತಲೇ ಇರುತ್ತದೆ. ಅದು ಚುಟಕವೂ ಹೌದು ಚಿತ್ರವೂ ಹೌದು. ಅದಕ್ಕೆ ಅದನ್ನು ನಾನು ಚಿತ್ರ ಕವನ ಅಂತ ಕರೆದು ಇಲ್ಲಿ ಮತ್ತೆ ಉದ್ಧರಿಸಿದ್ದೇನೆ. ಇದರ ಲೇಖಕರು ಯಾರೆಂಬುದು ನೆನಪಿಲ್ಲ.

ದುಸ್ತರ ನದಿಯಾ ಹೇಮಾವತಿಯಲಿ
ಬೆಸ್ತರ ತಿಮ್ಮನ ದೋಣಿಯು ಮುಳುಗಿತು
ಮುಳುಗಿತು ಗಮ್ಮನೆ ತಳಕೆ






ಗುಳು ಗುಳು ಗುಳ್ಳೆಗಳೆದ್ದವು
ತಿಮ್ಮನ ಸುಳಿವೇ ಸಿಗಲಿಲ್ಲ.

ಇದು ನಿಮಗೆ ಹಿಡಿಸಿದರೆ ಆನಂದಿಸಿ.

No comments: