Sunday, October 26, 2008

ಪತ್ತೇದಾರಿ ಕಾದಂಬರಿಕಾರ ನರಸಿಂಹಯ್ಯನವರು

ಇವತ್ತು ಬೆಳೆಗ್ಗೆ ದೂರದರ್ಶನದ ಚಂದನದಲ್ಲಿ ಪತ್ತೇದಾರಿ ಕಾದಂಬರಿಕಾರರಾದ ನರದಿಂಹಯ್ಯನವರ ಸಂದರ್ಶನ ಇತ್ತು. ಮೊದಲು ತಿಳಿದುಕೊಂಡ ವಿಷಯವೆಂದರೆ ಅವರು ೮೩ ವರ್ಷದ ವೃದ್ಧರು. ಎರಡನೆ ವಿಷಯ ಅಂದರೆ ಅವರ ವಿದ್ಯಾಭ್ಯಾಸ ಕನ್ನಡ ನಾಲ್ಕನೆಯ ತರಗತಿಯವರೆಗಷ್ಟೆ. ಸಾಹಿತ್ಯ ಕ್ಷೇತ್ರದ ಹಲವು ಮಹಾನ್ ವ್ಯಕ್ಟಿಗಳು ಶಾಲಾ, ವಿಶ್ವವಿದ್ಯಾಲಯಗಳ ಪದವಿ ಗಳಿಸಿದವರಲ್ಲವೆಂಬುದು ವಿಷೇಶವಲ್ಲ.
ಅವರು ಎಷ್ಟು ನಿರಾಡಂಬರ ಮತ್ತು ಸಾಮಾನ್ಯರಂತೆ ಕಾಣುತ್ತಿದ್ದರು ಎಂಬುದಕ್ಕೆ ಒಂದು ನಿದರ್ಶನ ಅದೇ ಸಂದರ್ಶನದಲ್ಲಿ ಹೊರಬಂತು. ನರಸಿಂಹಯ್ಯನವರು ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಕಾಣಲು ಹೋಗಿದ್ದರಂತೆ. ನಾನು ಪತ್ತೆದಾರಿ ಕಾದಂಬರಿಕಾರ ನರಸಿಂಹಯ್ಯ ಎಂದು ಹೇಳಿಕೊಡಾಗ ಅರಸು ಅವರಿಗೆ ಸಂಶಯ ಬಂದು ಈಗ ಬಂದಿರುವ ಮನುಷ್ಯ ನರಸಿಂಹಯ್ಯನೆಂದು ಹೇಳಿಕೊಂಡು ಮೋಸಮಾಡುತ್ತಿದ್ದಾನೆಂದು ಅನುಮಾನ ಬಂದು ಪೋಲೀಸರನ್ನು ಕರೆಸುವ ಯೋಚನೆ ಮಾಡಿದ್ದರಂತೆ. ಆದರೆ ಅದು ನಡೆಯಲಿಲ್ಲವಂತೆ, ಏಕೆಂದರೆ ಆ ಸಮಯಕ್ಕೆ ಇಬ್ಬರಿಗೂ ಪರಿಚಯವಿದ್ದ ವ್ಯಕ್ತಿಯು ಬಂದರಂತೆ. ಅವರು "ಏನು ನರಸಿಂಹಯ್ಯನವರೇ ನೀವು ಇಲ್ಲಿ" ಎಂದು ಮಾತನಾಡಿಸಿದಾಗ ಅರಸು ಅವರ ಸಂಶಯ ನಿವಾರಣೆ ಆಯಿತಂತೆ.
ಅವರ ಉತ್ತರಗಳು ಸರಳ ಆಡು ಭಾಷೆಯಲ್ಲಿದ್ದುದೂ ಅವರ ನಿರಾಡಂಬರತೆಯನ್ನು ಎತ್ತಿ ತೋರಿಸುತ್ತಿತ್ತು. ಈ ಇಳೀ ವಯಸ್ಸಿನಲ್ಲೂ ಅವರು ಚುರುಕಾದ ಉತ್ತರಗಳನ್ನು ಕೊಡುತ್ತಿದ್ದರು.
ಅವರು ೫೦೦ಕ್ಕೂ ಮಿಗಿಲಿ ಪುಸ್ತಕಗಳನ್ನು ಬರೆದಿದ್ದಾರೆ. ಆಗಿನ ಕಾಲಕ್ಕೆ ಅವುಗಳು ಬಹು ಜನಪ್ರಿಯವಾಗಿದ್ದವು. ಅವರು ಪತ್ತೇದಾರಿ ಅಲ್ಲದೆ ಇತರ ಪ್ರಾಕಾರಗಲ್ಲೂ ಕೈ ಆಡಿಸಿದ್ದಾರೆ. ಅವರ ಕಾದಂಬರಿಗಳನ್ನು ದೇವರಾಜ ಅರಸರೂ ಒದುತ್ತಿದ್ದರಂತೆ. ಇವರೇ ನರಸಿಂಹಯ್ಯ ಎಂದು ಖಾತರಿಯಾದ ಮೇಲೆ ಅವರ ಆರ್ಥಿಕ ಬವಣೆ ನೋಡಿ ಸರಕಾರದಿಂದ ೫೦೦ ರುಪಾಯಿ ಮಾಸಾಶನವನ್ನು ಮುಂಜೂರು ಮಾಡಿದರಂತೆ.
ಅವರ ಅಳಿಲು ಎಂದರೆ ಅವರ ಪತ್ತೇದಾರಿ ಜಾಡನ್ನು ಕೆಲವು ಸಿನಿಮಾಗಳಲ್ಲಿ ಉಪಯೋಗಿಸಿಕೊಂಡಿದ್ದರೂ ಗೌರವಧನ ಕೇಳಿದಾಗೆ ನಿರ್ಮಾಪಕರು ಅದು ತಮ್ಮದೇ ಕೃತಿಯೆಂದು ಹೇಳಿ ತಪ್ಪಿಸಿಕೊಂಡರಂತೆ. ನ್ಯಾಯಲಯದ ಕಟ್ಟೆ ಹತ್ತಲು ಹಣದ ಬೆಂಬಲವಿರಲಿಲ್ಲವೆಂದು ಅವರು ಹೇಳಿಕೊಂಡರು.
ಈಗಿನ ಸಂದರ್ಭದಲ್ಲಿ ಪುಸ್ತಕಗಳ ಉಪಯುಕ್ತತೆ ಕಡಿಮೆಯಾಗುತ್ತಿರುವುದಕ್ಕೆ ಪುಸ್ತಕಗಳ ಹೆಚ್ಚಿರುವ ಬೆಲೆಯೇ ಕಾರಣವೆಂದು ಅಭಿಪ್ರಾಯ ಪಟ್ಟರು.
ಈ ಲೇಖನವನ್ನು ಈ ಕೊಂಡಿಯಲ್ಲೂ ಪ್ರಕಟಿಸಿದ್ದೇನೆ:

No comments: