Saturday, January 17, 2009

ಕಾಫಿ ಮಾಡುವುದು

ನನಗೆ ಮೆಚ್ಚುಗೆಯಾದ ಹಿಂದಿನ ತಲೆಮಾರಿನ ಅಡಿಗೆ ವಿಧಾನಗಳನ್ನು ಇಲ್ಲಿ ನಮೂದಿಸಲಿದ್ದೇನೆ

ಮೊದಲಿಗೆ - ಕಾಫಿ ಮಾಡುವುದು
ನಮ್ಮ ಮನೆಯಲ್ಲಿ ಕಾಫಿಯನ್ನು ಫಿಲ್ಟರ್ ಉಪಯೋಗಿಸಿ ಮಾಡುವುದು ನಿಯಮ. ಆದರೆ ಯಾರಾದರು ಅತಿಥಿಗಳು ಬಂದಿದ್ದು ಆತುರದಲ್ಲಿ ಕಾಫಿ ಮಾಡಬೇಕಾದರೆ ನಮ್ಮ ಅಮ್ಮ ಬಳಸುತ್ತಿದ್ದ ವಿಧಾನ ಹೀಗಿದೆ: ನೀರು ಕುದಿಸಿದಮೇಲೆ ಅದಕ್ಕೆ ಕಾಫಿ ಪುಡಿ ಹಾಕಿ ಕೆಲವು ಸೆಕೆಂಡುಗಳ ನಂತರ ತಣ್ಣೀರನ್ನು ಡಿಕಾಕ್ಷನ್ ಮೇಲೆ ಚುಮುಕಿಸುತ್ತಿದ್ದರು. ಚುಮುಕಿಸಿದ ತಣ್ಣನೆಯ ನೀರು ಕಾಫಿಪುಡಿಯ ಚರಟವನ್ನು ಪಾತ್ರೆಯ ತಳಕ್ಕೆ ತಳ್ಳುವ ಕೆಲಸ ಮಾಡುತ್ತಿತ್ತು. ಮತ್ತೆ ಕೆಲವು ಸೆಕೆಂಡುಗಳ ನಂತರ ಮೇಲಿನ ತಿಳಿಯನ್ನು (ಕಲಕದಂತೆ ನಿಧಾನವಾಗಿ) ಇನ್ನೊಂದು ಪಾತ್ರೆಗೆ ಬಸಿದುಕೊಳ್ಳುತ್ತಿದ್ದರು. ಆಗ ಅದರಲ್ಲಿ ಕಾಫಿಪುಡಿಯ ಚರಟ ಇರುತ್ತಿರಲಿಲ್ಲ. ಡಿಕಾಕ್ಷನ್ ರೆಡಿ.

No comments: