ನಮ್ಮ ಮನೆಯಲ್ಲಿ ತೆರೆದ ಅಡಿಗೆಮನೆ ಇದೆ. ಅಂದರೆ ಹಜಾರದಿಂದ ಅಡಿಗೆಮನೆಗೆ ಮಧ್ಯೆ ಯಾವ ಅಡ್ಡಿಯೂ
ಇಲ್ಲ. ಹಜಾರದಲ್ಲಿ ಸೋಫಾದ ಮೇಲೆ ಕುಳಿತಿದ್ದವರಿಗೆ ಅಡಿಗೆ ಮನೆಯಲ್ಲಿ ನಡೆಯುವ ವಿದ್ಯಮಾನಗಳು ಕಾಣುತ್ತವೆ. ಇದರಿಂದ ಕೆಲವೊಮ್ಮೆ ತೊಂದರೆ ಇದೆ ಎಂದು ನನ್ನ ಶ್ರೀಮತಿಯ ಅನಿಸಿಕೆ. ಅತಿಥಿ
ಗಳು ಬಂದಿದ್ದಾಗ ಅವರ ಆತಿಥ್ಯಕ್ಕೆ ಮಾಡುವ ಪೇಯವನ್ನು ಚಮಚದಲ್ಲಿ ತೆಗೆದುಕೊಂಡು ರುಚಿಯನ್ನು ಸ್ವಲ್ಪ ನೋಡಿ ಏನನ್ನಾದರು ಸೇರಿಸಬೇಕಾಗಿದ್ದರೆ ಸೇರಿಸಿ ಮತ್ತೊಮ್ಮೆ ರುಚಿ ನೋಡಿ ಹಂಚಲು ತರುವ ಅಭ್ಯಾಸ ಅವರದು. ಇದು ಅತಿಥಿಗಳ ಗಮನಕ್ಕೆ ಬರಬಾರದೆಂದು ಅವರ ಆಸೆ. ಆದರೂ ಒಂದು ಸಾರಿ ರುಚಿ ನೋಡಿದ್ದನ್ನು ಕಂಡವರು ಕೇಳಿಯೇ ಬಿಟ್ಟರಂತೆ - ನಿಮ್ಮ ರುಚಿ ಎಲ್ಲಾರಿಗೂ
ಸರಿಬರುವುದೆಂಬ ನಂಬಿಕೆ ಹೇಗೆ ಇಟ್ಟುಕೊಂದಿದ್ದಿರಿ. ಅದಕ್ಕೆ ಉತ್ತರವಾಗಿ
ನನ್ನ ಶ್ರೀಮತಿ ಹೇಳಿದರಂತೆ ನನಗೆ ತೃಪ್ತಿಯಾದದ್ದನ್ನು ಅತಿಥಿಗಳಿಗೆ ಕೊಟ್ಟರೆ ನನಗೆ ತೃಪ್ತಿ ಅಂತ. ಅದಕ್ಕೋಸ್ಕರವೇ ನಾನು ಮೊದಲಿಗೆ ರುಚಿ ನೋಡುತ್ತೇನೆ ಅಂತ ಸಮಜಾಯಿಷಿ ಕೊಟ್ಟರಂತೆ.
No comments:
Post a Comment