Friday, April 3, 2009

ಮಹಾಭಾರತದಲ್ಲಿ 'ಪಾಲಿಟಿಕ್ಸ್'

ಮಹಾಭಾರತದ ಯುದ್ಧದ ಸಮಯದಲ್ಲಿ ಸಂಧಿ ಮುರಿದುಹೋಗಿ ಯುದ್ಧ ಖಚಿತವಾಗಬಹುದೆಂದು ಯೋಚಿಸಿ ಪಾಂಡವರು ಸೇನಾ ಸಂಗ್ರಹ ಮಾಡಲು ಎಲ್ಲಾ ರಾಜರನ್ನೂ ಕರೆತರಲು ರಾಜದೂತರನ್ನು ಕಳುಹಿಸಿಕೊಟ್ಟರು. ಈ ಸಂದೇಶಕ್ಕನುಸಾರವಾಗಿ ಶಲ್ಯ
ರಾಜನು ಪಾಂಡವರಿಗೆ ಸಹಾಯಕನಾಗಲು ದೊಡ್ಡ ಸೈನ್ಯಸಮೇತನಾಗಿ ಪಾಂಡವರಿದ್ದ ಸ್ಥಳಕ್ಕೆ ಪ್ರಯಾಣಮಾಡುತ್ತಿದ್ದನು. ಅವನ
ಸೈನ್ಯವು ದೊಡ್ಡದಾಗಿದ್ದು ಪ್ರಯಾಣದ ಮಧ್ಯದಲ್ಲಿ ಬಿಡಾರ ಮಾಡಲು ವಿಸ್ತಾರವಾದ ಜಾಗ ಬೇಕಾಗುತ್ತಲಿತ್ತು. ಶಲ್ಯನು ಸೇನೆಯೊಡನೆ ಪ್ರಯಾಣಮಾಡುತ್ತಿರುವ ಸುದ್ದಿ ತಿಳಿದ ಕೌರವನು ಶಲ್ಯನು ಪಾಂಡವರ ಪಕ್ಷಪಾತಿಯೆಂಬುದನ್ನು ತಿಳಿದಿದ್ದರೂ ಅವನನ್ನೂ ಅವನ ಸೇನೆಯನ್ನೂ ತನ್ನ ಪಕ್ಷಕ್ಕೆ ಸಳೆದುಕೊಳ್ಳಲು ಸಂಚು ಹೂಡುತ್ತಾನೆ. ಶಲ್ಯನು ಬರುತ್ತಿದ್ದ ಹಾದಿಯುದ್ದಕ್ಕೂ ತಂಗಲು ರಚಿಸಿದ್ದ ಮಂಟಪಗಳು ವಿಶಾಲವಾಗಿಯೂ ಆಕರ್ಶಕವಾಗಿಯೂ ಅವರಿಗೆ ಆತಿಥ್ಯ ಮತ್ತು ಆಟ ಊಟ ವಿಹಾರಗಳ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಏರ್ಪಾಡು ಮಾಡಿದನು. ಸೌಲಭ್ಯಗಳ ಮತ್ತು ವೈಭವಗಳ ಸುರಿಮಳೆಯೇ ಆಗಿತ್ತು; ಅಸಾಧ್ಯವಾದ ಸುಖೋಪಭೋಗಗಳು ದೊರೆಯಿತು. ಶಲ್ಯನು ಇದರಿಂದ ತುಂಬ ಸಂತುಷ್ಟನಾಗಿ ಈ ಸೌಲಭ್ಯಗಳ ಶಿಲ್ಪಿಯಾದ ಯುಧಿಷ್ಟಿರನ ಶಿಲ್ಪಿಗೆ ಬಹುಮಾನ ಕೊಡಲು ತನ್ನ ಇಷ್ಟವನ್ನು ತೋರ್ಪಡಿಸುವವರೆಗೆ ಆದರೆ ಈ ಏರ್ಪಾಡುಗಳು ಕೌರವನಿಂದ ಉಂಟಾಗಿದೆ ಎಂಬುದು ಅವರುಗಳು ಬಹಳ ಗುಟ್ಟಾಗಿ ಕಾದುಕೊಂದಿದ್ದರು; ಇದು ಕೌರವನ ಸಂಚೂ ಆಗಿತ್ತು.

ಆ ಸಮಯಕ್ಕೆ ಸರಿಯಾಗಿ ದುರ್ಯೋಧನನು ಕಾಣಿಸಿಕೋಡಾಗಲೇ ಶಲ್ಯನಿಗೆ ತನ್ನ ಪಕ್ಷಕ್ಕೆ ಸೆಳೆದುಕೊಳ್ಳಲು ದುರ್ಯೋಧನನು
ಹೂಡಿದ ತಂತ್ರವೆಂದು ತಿಳಿಯಿತು. ಆದರೂ ಶಲ್ಯನು ದುರ್ಯೋಧನನನ್ನು ಬಿಗಿದಪ್ಪಿಕೊಂಡು, ಕುಶಲಪ್ರಶ್ನೆಗಳಾದಮೇಲೆ, ನಿನಗೆ
ಬೇಕಾದ್ದು ಕೇಳೆಂದು ಹೇಳಿದನು. ತನ್ನ ಸಂಚು ಕಾರ್ಯಗತವಾಗಿದ್ದನ್ನು ಸದುಪಯೋಗ ಪಡಿಸಿಕೊಳ್ಳಲು ತನ್ನ ಸೇನೆಗೆ ದಂಡನಾಯಕನ ಪಟ್ಟ ಒಫ್ಫಿಕೊಳ್ಳುವಂತೆ ವರವನ್ನು ಬೇಡಿದನು. ಅದನ್ನು ಶಲ್ಯನು ದಯಪಾಲಿಸಿದನು.

No comments: