ವಿಜುಅಲ್ ಸಂಗೀತ ಕಛೇರಿ ಅನ್ನೋದು ನನಗೆ ಹೊಸದು. ನೆನ್ನೆ (೦೫-೦೯-೦೯) ಬೆಂಗಳೂರಿನ ರಾಗಿಗುಡ್ಡ ದೇವಸ್ತಾನದಲ್ಲಿ ವಿದ್ವಾನ್ ಮೈಸೂರು ರಾಮಾಚಾರ್ ಅವರ ದಾಸರ ಪದಗಳ ಹಾಡುಗಾರಿಕೆ ಇತ್ತು. ಇವರ ಕಛೇರಿಗೆ ನಾನು ಹೋಗಿದ್ದು ಇದೇ ಮೊದಲು. ಇವರ ಶೈಲಿ ನನಗೆ ಗೊತ್ತಿರಲಿಲ್ಲ.
ಇವರು ಹಾಡುವಾಗ ದೇವರ ಚಿತ್ರ ಪಠಗಳನ್ನು ಬಲಗೈಲಿ ಹಿಡಿದು ಪ್ರದರ್ಶಿಸುತ್ತಾರೆ. ಕೆಲವೊಮ್ಮೆ ಎರಡು ಕೈಲಿಯಲ್ಲೂ ಹಿಡಿಯುತ್ತಾರೆ. ವಿಶೇಷವೆಂದರೆ ಅವರ ಸಹಾಯಕರು ಚಿತ್ರಪಟಗಳ ದೊಡ್ಡ ಸಂಕಲನದಿಂದ ಒಂದೊಂದಾಗಿ ತೆಗೆದು ಕೊಡುತ್ತಾರೆ. ಹಾಡಿಗೆ ಅನುಗುಣವಾಗಿ ಉಚಿತವಾದ ಪಠಗಳನ್ನು ಜೋಡಿಸಿಕೊಂಡಿರುತ್ತಾರೆಂದು ಹೇಳಬೇಕಾದ್ದೇ ಇಲ್ಲ. ಪಠಗಳ ಆಯ್ಕೆ ಪದರ್ಶಿಸಬೇಕೆಂಬ ಯೋಜನೆ ಬಹಳ ಮೆಚ್ಚಿಗೆಯ ವಿಷಯ. ಭಕ್ತಿಯ ಪ್ರಚೋದನೆಗೆ ಇದು ಸಹಾಯಕಾರಿ. ಒಂದೇ ಒಂದು ಕೊರತೆ ಎಂದರೆ ಪಠವನ್ನು ಪದರ್ಶಿಸುತ್ತಿದ್ದಾಗ ಹಾಡುವ ವಿದ್ವಾನರ ಮುಖ ಸಭಿಕರಿಗೆ ಮುಚ್ಚುತ್ತದೆ. ಆದರೆ ಇದು ಅವರಿಗೆ ಮುಖ್ಯವಲ್ಲವೇನೋ!
೧೫-೮-೫೦
9 years ago
No comments:
Post a Comment