Thursday, October 1, 2009

ರವಿ ಕಾಣದಿದ್ದು ಕವಿ ಕಂಡ .... ಕವಿ ಕಾಣದಿದ್ದು ಯಾರು ಕಂಡರು?

ಪುರಂದರ ದಾಸರು ಹಾಡಿದ ಈ ಪದ ನೋಡಿ:


ಕಪ್ಪು ಯೆನ್ನಲು ಬೇಡವೋ| ಶ್ರೀಹರಿಯನ್ನು| ಕಪ್ಪು ಯೆನ್ನಲು ಬೇಡವೋ||
ಹರಿಯ ಮಧ್ಯದಿ ಕಪ್ಪು| ಹಾಲಾಹಲವು ಕಪ್ಪು| ಪರಮ ಅಶ್ವವೆ ಕಪ್ಪು||
ಪಾರಿಜಾತವೆ ಕಪ್ಪು| ಕರಿಗಳೆಲ್ಲವು ಕಪ್ಪು|ಸುಲಲಿತವರದೆ ಕಪ್ಪು||
...............
ಅಂಗನೆ ಕೇಳು ಮೂರುಲೋಕದಿ ನಮ್ಮ ಪುರಂದರ ವಿಠಲನ ಮೂರುತಿ ಕಪ್ಪು||

ಕರಿ ಬಣ್ಣ ಹೇಗೆ ಕೀಳಲ್ಲ - ಪ್ರಪಂಚದಲ್ಲಿ ಅತಿ ಶ್ರೇಷ್ಟವಾದದ್ದೆಲ್ಲ ಕಪ್ಪು ಬಣ್ಣದ್ದೇ, ಗುಣಕ್ಕೂ ಬಣ್ಣಕ್ಕೂ ಸಂಬಂಧವಿಲ್ಲ ಎಂದಿದ್ದಾರಲ್ಲವೇ?


ಇನ್ನೊಂದು ಪದ್ಯ ನೋಡಿ:(ಮೂಲ:http://bookaholicblog.blogspot.com/2009/06/when-i-born-i-black.html)

When I born, I black
When I grow up, I black
When I go in Sun, I black
When I scared, I black
When I sick, I black
And when I die, I still black

And you white fellow
When you born, you pink
When you grow up, you white
When you go in sun, you red
When you cold, you blue
When you scared, you yellow
When you sick, you green
And when you die, you grey

And you calling me coloured?

********************************************************************


ಕೆ.ಎಸ್.ನರಸಿಂಹಸ್ವಾಮಿ ಯವರ `ಶಾನುಭೋಗರ ಮಗಳು' ಕವನದಲ್ಲಿ

ಬೆಳಗಾಗ ಕೆರೆಯಬಳಿ ನನ್ನ ತಂಗಿಯ ಕಂಡು
ಕನ್ನೆ ತೋರಿದಳಂತೆ ಕಾರಣವನು:-
ಹೊನ್ನೂರ ಕೇರಿಯಲಿ ಬಂದಿದ್ದ ಹೊಸಗಂಡು
ತನ್ನ ಕೂದಲಿಗಿಂತ ಕಪ್ಪು ಎಂದು.

`ವೈದಿಕರ ಮನೆಗಳಲಿ ಊಟ ಹೊತ್ತಾಗುವುದು;- ಒಲ್ಲೆ'
ಎಂದು ಕರಿ ಗಂಡನ್ನು ತಿರಸ್ಕರಿಸಿದ ಶಾನುಭೋಗರ ಮಗಳು ಕರಿಬಣ್ಣ ಕೀಳು ಅಂದುಕೊಳ್ಳಲಿಲ್ಲವೆ? ನಮ್ಮ ಮಕ್ಕಳು ಕರಿ ಆದರೆ ಏನು ಗತಿ ಎಂದುಕೊಂಡವರ ಮನಸ್ಸಿನಲ್ಲಿ ಕರಿ ಬಣ್ಣ ಕೀಳು ಅಂತ ನಿಂತು ಹೋಗಿದೆ ಅಲ್ಲವೆ?

No comments: