ಇಂದ-ಗೆ ಅಂದರೇನು? ಈಗಿನ ಕಾಲದವರಿಗೆ, ಕನ್ನಡದಲ್ಲಿ ಆಂಗ್ಲ ಪದಗಳು ನುಗ್ಗಿ ಸಾಮಾನ್ಯ ರೂಢಿಯಲ್ಲಿದ್ದ ಪದಗಳು ಮಾಯವಾಗಿ ಬಿಟ್ಟು `ಇಂದ-ಗೆ' ಅಂಥ ಪದಗಳನ್ನು ಕೇಳಿದರೆ ಕಚಗುಳಿ ಇಟ್ಟಂಥಾಗುದು ಸಹಜ.
ಇರಲಿ ನಾನು ಹೇಳ ಹೊರಟಿದ್ದೇ ಬೇರೆ. ಹಿಂದೆ ಉದ್ಯೋಗ ಪ್ರಪಂಚದಲ್ಲಿ ಇದ್ದ ಹುದ್ದೆಗಳು ಅಂದರೆ -- ಗುಮಾಸ್ತೆ, ಉಪಾಧ್ಯಾಯ, ಪೋಲೀಸ್ ಪೇದೆ ಅಂಥವುಗಳು. ಮಧ್ಯಮ ವರ್ಗದವರಿಗೆ ಫ್ರೌಡ ಶಾಲೆ, ಅಬ್ಬಬ್ಬ ಅಂದರೆ ವಿಶ್ವವಿದ್ಯಾಲಯದ ಪದವಿ ತಲುಪಿದರೆ ಅದೇ ಹೆಚ್ಚು. (ಅಧಿಕಾರಿ, ವಕೀಲ, ವೈದ್ಯ ಅಂದರೆ ಅವಕ್ಕೆ ವಿಧ್ಯಾಭ್ಯಾಸವನ್ನು ಮುಂದುವರಿಸಿ ಹೆಚ್ಚನ ಪದವಿಗಳನ್ನು ಪಡೆಯಬೇಕಾಗಿತ್ತು.) ಸರ್ಕಾರಿ ಕಛೇರಿಯಲ್ಲಿ ಗುಮಾಸ್ತೆ ಕೆಲಸ ಸಿಕ್ಕರೆ ಹಿಗ್ಗೋ ಹಿಗ್ಗು. ಹೊಸದಾಗಿ ಕೆಲಸಕ್ಕೆ ಸೇರಿದವರನ್ನು ಮೊದಮೊದಲು `ಇಂದ-ಗೆ' ಕೆಲಸಕ್ಕೆ ಕೂಡಿಸುತ್ತಿದ್ದರು. ಏಕೆಂದರೆ ಅಲ್ಲಿ ಹೆಚ್ಚಿನ ಅನುಭವ ಮತ್ತು ಬುಧ್ಧಿವಂತಿಕೆಗಳು ಬೇಕಾಗುತ್ತಿರಲಿಲ್ಲ. ಅದೂ ಅಲ್ಲದೆ ಈಗಾಗಲೇ ಸ್ಥಳ ಭದ್ರಮಾಡಿಕೊಂಡಿರುವರ ಪಲ್ಲಟ ಕಷ್ಟವಾಗುತ್ತಿತ್ತು. ಈ ಪೀಠದಲ್ಲಿ ತುಂಬ ದಿನಗಳು ಉಳಿದವರು ಕೆಲವೊಮ್ಮೆ ಬೇರೆ ಕೆಲಸಕ್ಕೆ ಲಾಯಕ್ಕು ಅನ್ನಿಸುವಸ್ಟು ಬುಧ್ಧಿವಂತರಾಗಿ ಕಾಣಿಸಿರದಿರಬಹುದಿತ್ತು. ಮತ್ತೆ ಕೆಲವುಸಾರಿ ಕೆಲವರಿಗೆ ಇದೇ ಸಲೀಸು ಜಾಗ ಅನ್ನಿಸಿದ್ದಿರಬಹುದು.
`ಇಂದ-ಗೆ' ಎನ್ನು ಪದ ನನ್ನ ಮನಸ್ಸ್ಸಿಗೆ ಬಂದಾಗ ಒಮ್ಮೆ ಬುಧ್ಧಿವಂತ ಈ ಜಾಗದಲ್ಲಿ ಕೂತು ಏನೇನು ಮಾಡಿದ್ದ ಅನ್ನುವುದು ನೆನಪಿಗೆ ಬಂತು. ಅದನ್ನು ಹೇಳಲು ಹೊರಟಿದ್ದೇನೆ.
ದೂರವಾಣಿಯ ಮಂಡಲ ಕಛೇರಿಯಲ್ಲಿ ಇಂದ-ಗೆ ಗುಮಾಸ್ತೆಯಾಗಿದ್ದವರಿಗೆ ಒಬ್ಬ ಗ್ರಾಹಕರು ತಮ್ಮ ದೂರವಾಣಿಯನ್ನು ಮುಚ್ಚಲು ಬರೆದ ಪತ್ರವನ್ನು ತಂದು ಕೊಟ್ಟರು. ಆಗ ಹೊಸ ದೂರವಾಣಿ ಸಂಪರ್ಕಕ್ಕೆ ಬಹಳ ವರ್ಷಗಳೇ ಕಾಯಬೇಕಾಗಿತ್ತು. ಈ ಪತ್ರವನ್ನು ನೋಡಿ ಆ ಗುಮಾಸ್ತೆಗೆ ಸುವರ್ಣಾವಕಾಶದ ಕನಸು ಕಂಡಿತು. ಇದು ಅವರಿಗೆ ಕಟ್ಟಿದ್ದ ನಾಲಾಯಕ್ಕುತನದ ಪಟ್ಟಕ್ಕೆ ವಿರುಧ್ಧವಾಗಿತ್ತು. ಆ ಪತ್ರವನ್ನು ಕಛೇರಿ ದಾಖಲೆಯಲ್ಲಿ ಸೇರಿಸದೆ ತಡೆಹಿಡಿದು ಆ ಅರ್ಜಿದಾರರೊಂದಿಗೆ ಒಳಒಪ್ಪಂದಕ್ಕೆ ತೊಡಗಿದರು. `ನೀವು ಸುಮ್ಮನಿದ್ದು ಬಿಡಿ, ನಾನು ದೂರವಾಣಿ ಬೇಕಾಗಿದ್ದವರಿಗೆ ಇದನ್ನು ಹಸ್ತಾಂತರಿಸಿ ನಿಮಗೂ ಲಾಭ ಆಗುವಂತೆ ಮಾಡುತ್ತೇನೆ' ಅಂತ ಅವರ ಸಲಹೆಯಾಗಿತ್ತು.
ಆದರೆ ಆ ಗ್ರಾಹಕರಿಗೆ ಕಾನೂನು ರೀತ್ಯ ದೂರವಾಣಿಯನ್ನು ಹಿಂದಕ್ಕೆ ಕೊಡುವುದು ಬೇಕಾಗಿತ್ತು. ಹೀಗಾಗಿ ಅವರಿಗೆ ಇಂದ-ಗೆ ಗುಮಾಸ್ತೆಯ ನಡೆ ಸರಿಹೋಗದೆ ದೂರಿತ್ತರು.
ಮುಂದೆ ಏನೆಲ್ಲ ಕ್ರಮ ಜರುಗಿತು ಅನ್ನುವುದು ಮುಖ್ಯವಲ್ಲ.
ಇಂದ-ಗೆ ಗುಮಾಸ್ತೆ ಪದವಿಯೂ ಕೀಳಲ್ಲ ಅನ್ನುವುದು ಮುಖ್ಯ.
೧೫-೮-೫೦
9 years ago
No comments:
Post a Comment