ಈ ಸಸ್ಯ ಔಷದಯುಕ್ತವಾದದ್ದು. ಇದು ನಮ್ಮ ಮನೆಯಲ್ಲಿ ಸಂವೃಧ್ಧಿಯಾಗಿ ಬೆಳೆದಿದೆ.
ನಾವು ಯಾವಾಗ ಚಟ್ನಿಮಾದಿದರೂ ಒಂದಷ್ಟು ಈ ಎಲೆಯನ್ನು ಕೊತ್ತಂಬರಿ ಸೊಪ್ಪಿನಂತೆ ಸೇರಿಸಿ ಬಿಡುತ್ತೇವೆ. ಅದರ ಒಣಗಿಸಿದ ಎಲೆಯನ್ನು ಚಟ್ನಿಪುಡಿಗೂ ಸೇರಿಸುತ್ತೇವೆ. ಈ ಸಲಿ ಏಕೋ ತುಂಬ ಹರಡಿಬಿಟ್ಟಿದೆ ಅಂತ ಸಲ್ಪ ಸಂಕ್ಷಿಪ್ತಗೊಳಿಸಲು ಅದನ್ನು ಕಿತ್ತೆ. ಕಿತ್ತಿದ್ದೇ ತುಂಬಾ ಅನ್ನಿಸಿತು. ಅದನ್ನು ಒಣಗಿಸಲು ಪರಿಷ್ಕಾರ ಮಾಡುವುದು ಸ್ವಲ್ಪ ಕಷ್ಟದ ಕೆಲಸ. ಬಿಸಾಕಲೂ ಮನಸ್ಸು ಬರಲಿಲ್ಲ. ಹೇಗೂ ನಾನು ರೆಟೈರ್ಡ್. ತಾಳ್ಮೆಯಿಂದ ಪ್ರಾರಂಬಿಸಿದೆ. ಒಂದೊಂದೇ ಎಲೆ ಕಿತ್ತೆ, ಅದನ್ನು ತೊಳೆದೆ, ಬಟ್ಟೆ ಮೇಲೆ ಒಣಗಲು ಹರಡಬೇಕಲ್ಲ. ಗುಡ್ಡೆಹಾಕಿ ಕೈಯಿಂದ ಆಡಿಸಿ ಹರಡಿದರೆ ಸಾಕಾಗಿತ್ತು. ಆಗ ಹುಡುಗು ಬುಧ್ದಿ ನನ್ನ ಮೇಲೆದ್ದು ಬಂತು. ಒಂದೊಂದೇ ಎಲೆ ತೆಗೆದು ತೆಗೆದು ಒಂದರ ಪಕ್ಕ ಒಂದು ಇಡುತ್ತಾ ಹೋದೆ. ಹೊತ್ತು ಕಳೆದಿದ್ದೇ ಗೊತ್ತಾಗಲಿಲ್ಲ. ಎಲ್ಲಾ ಎಲೆಗಳೂ ಮುಗಿದಮೇಲೆ ಆ ಏರ್ಪಾಡು ನೋಡಿ ನಾನೇ ಆನಂದ ಪಟ್ಟುಕೊಂಡೆ.
ಒಂದು ದಿನ ಬಿಟ್ಟು ಅದನ್ನು ಶೇಕರಿಸಲು ಹೊರಟಾಗ ಅದರ ಫೋಟೋ ತೆಗೆಯುವ ಐಡಿಯಾ ಬಂತು. ಅದರ ಫಲ ಇಲ್ಲಿದೆ.
೧೫-೮-೫೦
9 years ago
No comments:
Post a Comment