ಮುದ್ರಣ ಹೊಸ ರೀತಿ ಇದೆಯಲ್ಲವೇ? ಈ ಮಾರ್ಪಾಡುಗಳ ಪ್ರಸ್ತಾಪ ಪುಸ್ತಕದ ಮುನ್ನುಡಿಯಲ್ಲಿದೆ. ಈ ಮಾರ್ಪಾಡುಗಳನ್ನು ಬಳಸಿ ಮುದ್ರಿತವಾಗಿರುವ ಉದಾಹರಣೆ ಅದು.
ಕನ್ನಡ ಬರವಣಿಗೆಯಲ್ಲಿ ಈಗಿರುವ ಅಕ್ಷರ ಸಂಯೋಜನೆಯ ಕ್ರಮ ಹಲವು ದೃಷ್ಟಿಯಿಂದ, ಅದರಲ್ಲೂ ಮುದ್ರಣ ದೃಷ್ಟಿಯಿಂದ, ಬಲು ತೊಡಕಾದ್ದುದೆಂದೂ ಯಾವ ರೀತಿಯಿಂದಲಾದರೂ ಕೊಂಚಮಟ್ಟಿಗಾದರೂ ತೊಡಕು ಬಿಡಿಸಿ ಸರಳಮಾಡಬೇಕೆಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಏರ್ಪಟ್ಟಿದ್ದ ಒಂದು ಸಮಿತಿ ಸೂಚಿಸಿದ್ದ ಮಾರ್ಪಾಡುಗಳು ಮೂರು:(೧) ದೀರ್ಘ ಚಿಹ್ನೆಯನ್ನು ಎಲ್ಲ ಕಡೆಯೂ ಒಂದೇ ಬರೆಯುವುದು (೨) ಒತ್ತಕ್ಷರವನ್ನು ಬಿಡಿಸಿ ಪಕ್ಕದಲ್ಲಿ ಬರೆಯುವುದು (೩) ಎಲ್ಲಾ ಮಹಾಪ್ರಾಣ ಚಿಹ್ನೆಗಳನ್ನೂ ಅಲ್ಪ ಪ್ರಾಣ ಚಿನ್ಹೆಗಳ ಹೊಕ್ಕಳು ಸೀಳಿಯೆ ಮಾಡಿಕೊಳ್ಳುವುದು.
ಆ ಬದಲಾವಣೆಗಳು ಬಳಕೆಗೆ ಬರಲೇ ಇಲ್ಲ.
No comments:
Post a Comment