Wednesday, January 20, 2010

ನಾವು ತಪ್ಪಾಗಿ ಬದಲಾಗುತ್ತಿದ್ದೇವೆ

ಇತ್ತೀಚೆಗೆ ಒಂದು ಪ್ರವಚನದಲ್ಲಿ ಕೇಳಿದ್ದೇನೆಂದರೆ ನಾವುಗಳು ನವ ಜನಾಂಗಕ್ಕೆ ಶಿಸ್ತು ಕಲಿಸುತ್ತಿಲ್ಲ ಅಂತ. ಅವರು ಕೊಟ್ಟ ಉದಾಹರಣೆ ಮದುವೆಮನೆಗಳಲ್ಲಿ ನಿಶ್ಶಬ್ದದಿಂದ ಕೂತು ನಡೆಯುವ ವಿಧಿಗಳನ್ನು ಯಾರೂ ಗಮನಿಸುವುದಿಲ್ಲ. ಮದುವೆಮನೆ ಒಂದು ಸಂತೆಯಂತೆ ಕಾಣಿಸುತ್ತದೆ ಎಂದು. ಅಲ್ಲಿನ ಕಾರ್ಯಕ್ರಮದಲ್ಲಿ ತಿಳಿಯಬೇಕಾದದ್ದು ಬಹಳ. ಆದರೆ ಜನಗಳು ಮದುವೆಮನೆಗೆ ಹೋಗುವುದು ಊಟಕ್ಕೋ, ಯಾರನ್ನೋ ಭೇಟಿಯಾಗುವುದಕ್ಕೋ, ಇಸ್ಪೀಟ್‍ಸಭೆಗೋ, ಹರಟೆಕೊಚ್ಚುವುದಕ್ಕೋ, ವಾರಿಗೆಗೆ ಹುಡುಕುವುದಕ್ಕೋ ಆಗಿಹೋಗುತ್ತಲಿದೆ.
ಇದೇ ಸನ್ನಿವೇಷ ವೈಕುಂಠ ಸಮಾರಾಧನಗಳಲ್ಲೂ ಕೂಡ. ವೇದಘೋಷ ನಡೆಯುತ್ತಿದ್ದಾಗ ಗಿಜಿಗಿಜಿ ಸದ್ದು. ಅಂತಹ ಒಂದುಕಡೆ, ಪುರೋಹಿತರು ಕ್ಲೇಶದಿಂದ, ನಿಶಬ್ದವಿದ್ದರೆ ಮುಂದುವರಿಸುವುದಾಗಿ ಎಚ್ಚರಿಕೆ ಕೊಟ್ಟರು. ಇದು ನಾವು ಹೇಗೆ ತಪ್ಪಾಗಿ ಬದಲಾಗುತ್ತಿದ್ದೇವೆ ಅಂತ ತೋರಿಸುತ್ತದೆ.
ಇಲ್ಲಿ ಮದುವೆಮನೆಗಳಲ್ಲಿ ಏನು ಮಾಡಬೇಡಿರೆಂದು ಹೇಳಿರುತ್ತಾರೆ. ಇದು ಪಾಚಾತ್ಯರಿಗಾಗಿಯಾದರೂ ಕೆಲವು ನಮಗೂ ಅನ್ವಯಿಸುತ್ತದೆ. ಕೊಂಚ ಗಮನ ಕೊಡೋಣ.
ಕೊಸರು:
ಈ ಬ್ಲಾಗ್ ಬರೆದ ಹಿನ್ನೆಲೆ:
10 Things Not To Say At Wedding ಎಂಬ ವಿಷಯ ಇವತ್ತು http://digg.com ನಲ್ಲಿ ಓದಿದೆ. ಆಗ
ನೆನ್ನೆ ಬೆಂಗಳೂರಿನ ರಾಗಿಗುಡ್ಡದ ಪ್ರವಚನ ಮಂದಿರದಲ್ಲಿ ವಿದ್ವಾನ್ ಪಂಚಮುಖಿ ಪವಮಾನಾಚಾರ್ ಅವರು ತಮ್ಮ ಪ್ರವಚನದಲ್ಲಿ ಜನರ ಅಡ್ಡನಡುವಳಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದು ಜ್ಞಾಪಕಕ್ಕೆ ಬಂದು ಇವೆರಡಕ್ಕೂ ಗಂಟು ಹಾಕಿದೆ.

No comments: