Tuesday, January 26, 2010

ಪಾದರಕ್ಷೆ

ಪಾದರಕ್ಷೆ ಜ್ಞಾಪಕಕ್ಕೆ ಬಂದಾಗ ಮನಃಪಟಲದಲಿ ಹಾದುಹೋಗುವ ವಿಚಾರಗಳು ಹಲವು:
೧. ಭರತ ರಾಮನ ಪಾದರಕ್ಷೆಯನ್ನು ರಾಮನಂತೆ ಗ್ರಹಿಸಿ ರಾಜ್ಯಭಾರ ಮಾಡಿದ್ದು.
೨. ಬುಷ್‍ಗೆ ಪತ್ರಕರ್ತ ಪಾದರಕ್ಷೆಯನ್ನು ಎಸೆದಿದ್ದು.
೩. ಸಂಜಯದತ್ ನ್ಯಾಯಾಲಯದೊಳಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಾಗ ಪಾದರಕ್ಷೆಯನ್ನು ಹೊರಗೆ ಬಿಟ್ಟಿದ್ದಾಗ ಅದು ಕಳುವಾಗಿದ್ದು. (ಪಾದರಕ್ಷೆಯನ್ನು ಜ್ಞಾಪಕಾರ್ಥ ವಸ್ತುವಾಗಿ ಕದ್ದರೋ ಇಲ್ಲ ಅದರ ಉಪಯೋಗಕ್ಕೆ ಕದ್ದರೋ ತಿಳಿಯದು)
೪. ಬೆಂಗಳೂರಿನ ರಾಗಿಗುಡ್ಡ ದೇವಸ್ಥಾನದಲ್ಲಿ ಇರುವ ವ್ಯವಸ್ಥಿಥ ಪಾದರಕ್ಷೆಯ ರಕ್ಷಣಾವಿಭಾಗ.
೫. ಪಾದರಕ್ಷೆಯ ರಕ್ಷಣಾವಿಭಾಗವನ್ನು ನಡೆಸಲು ಕಷ್ಟವಾದಾಗ ಬೆಂಗಳೂರಿನ ರಾಮಕೃಷ್ಣ ಮಠದವರು ಭಾಷಣಮಂದಿರದಲ್ಲಿ ಪಾದರಕ್ಷೆಯನ್ನು ಉಪಯೋಗಿಸಲು ಬಿಟ್ಟಿದ್ದು.
೬. ದೇವಸ್ಥಾನಗಳಲ್ಲಿ ಕಳವಾಗುವ ಹೆದರಿಕೆಯಿಂದ ನಮ್ಮಗಳ ಧ್ಯಾನ ದೇವರಮೇಲಲ್ಲದೆ ಪಾದರಕ್ಷೆಗಳ ಮೇಲೆ ಇರುವುದು.

2 comments:

ಮನಸಿನಮನೆಯವನು said...

ನಮಸ್ತೆ,

ಒಮ್ಮೆ ಸದ್ದಾಂ ಅವರು ಒಂದು ಮೀಟಿಂಗ್ ಗೆ ಹೋಗಿದ್ದರು,ಅವರ ಪಕ್ಕದಲ್ಲಿ ಕೂತಿದ್ದ ಅತಿಥಿ ಮಹಾಶಯ ಕಾಲಮೇಲೆ ಕಾಲು ಹಾಕಿ ಕೂತಾಗ ಅವರ ಪಾದರಕ್ಷೆ ಸದ್ದಾಂಗೆ ಕಿರಿಕಿರಿ ಎನ್ನಿಸಿ ಎದ್ದು ಹೊರಟೆಬಿಟ್ಟರು ....

ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

Anonymous said...

laudable subheading levin dear intuition synergizing academese complied utilities alekssandr lookup
lolikneri havaqatsu