ಇವತ್ತು ಮಾರ್ಚ್ ೧ನೇ ತಾರೀಖು. ರಾಗಿಗುಡ್ಡ ದೇವಸ್ತಾನದಲ್ಲಿ ಇಂದಿನಿಂದ ಬಯಲು ರಂಗಮಂಟಪದಲ್ಲಿ ಒಂದು ತಿಂಗಳು ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಕ್ಕೆ ರಂಗಮಂಟಪವನ್ನು ಸಜ್ಜು ಮಾಡುವಬಗ್ಗೆ ಹೋದವರ್ಷವೇ
ಇಲ್ಲಿ ಪ್ರಸ್ತಾಪ ಮಾಡಿದ್ದೆ. ಇವತ್ತೂ ಕಾರ್ಯಕ್ರಮಕ್ಕೆ ಹೋಗಿದ್ದೆ. ಇವತ್ತು ನನಗೆ ಅನ್ನಿಸಿದ್ದು ಈ ಬೆಂಗಳೂರು ನಗರದಲ್ಲಿ ಅಷ್ಟು ಬೃಹತ್ ಅಂಗಳವನ್ನು (ಸುಮಾರು ೩೦೦ ಅಡಿ ಉದ್ದ ೧೫೦ ಅಡಿ ಅಗಲ) ಸಗಣಿಯಿಂದ ಸಾರಿಸಲು ಬೇಕಾಗಬಹುದಾದ ಸಗಣಿ ಬೆಂಗಳೂರು ನಗರದಲ್ಲಿ ಹೊಂದಿಸಲು ಎಷ್ಟು ಕಷ್ಟವಾಗಿರಬಹುದು ಅಂತ; ಏಕೆಂದರೆ ಇಲ್ಲಿ ಅಷ್ಟು ಜಾನುವಾರು ಒಂದೇ ಕಡೆ ವಾಸವಾಗಿರುವುದು ದುರ್ಲಭ.
No comments:
Post a Comment