ನಮ್ಮ ಮನೆಯಲ್ಲಿ ಮಳೆ ನೀರು ಕೊಯ್ಲು
ಅಂತರ್ಜಲದ ಅಭಾವ ಕಂಡುಬಂದನಂತರ ಸುಮ್ಮನೆ ಹರಿದುಹೋಗುತ್ತಿದ್ದ ಮಳೆನೀರನ್ನು ಸಂಗ್ರಹಿಸುವ ಮತ್ತು ನೆಲಕ್ಕೆ ಇಂಗಿಸಿ ಅಂತರ್ಜಲದ ಮಟ್ಟವನ್ನು ಮೇಲಕ್ಕೆ ಏರಿಸುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಸಾರ್ವಜನಿಕರ ಕೈಲಿ ಮಾಡಿಸಲು ಸರ್ಕಾರ ಆಜ್ಞೆ ಹೊರಡಿಸಿದೆ. ನಮ್ಮ ಮನೆಯಲ್ಲಿ ಇದನ್ನು ಅಳವಡಿಸಿದಾಗ ತೆಗೆದ ಚಿತ್ರಗಳು ಇಲ್ಲಿವೆ.
ಮನೆ ಮಾಳಿಗೆಯಿಂದ ಬರುವ ಎಲ್ಲಾ ತೂಬುಗಳನ್ನೂ ಒಂದುಗೂಡಿಸಬೇಕು. ಇದಕ್ಕೆ ಕೊಳವೆಗಳನ್ನು ಉಪಯೋಗಿಸಿ ಅವುಗಳನ್ನು ಕೇಂದ್ರೀಕರಿಸಬೇಕು.
ನೀರಿನ ತೊಟ್ಟಿಗೆ ಬಿಡುವ ಮೊದಲು ಶೋಧಕದವನ್ನು ಅಳವಡಿಸಿದ್ದೇವೆ.
ತೊಟ್ಟಿಯಿಂದ ಇಂಗು ಗುಂಡಿಗೆ ಕೋಡಿಹರಿಯಲು ಒಂದು ಕೊಳವೆಯನ್ನು ನೆಲದೊಳಗೆ ಹಾಕಿದೆ.
೧೫-೮-೫೦
9 years ago
No comments:
Post a Comment