"ರಾಜಲಕ್ಷ್ಮಿ ವಿಚಾರಣಾ ಅಂಕಣಕ್ಕೆ ಬನ್ನಿ" ಅಂತ ಸ್ಯಾನ್ ಫ್ರಾಂನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಸಿಂಗಪುರ್ ನಿಂದ ಬಂದಿಳಿದಾಗ ದ್ವನಿವರ್ಧಕದಿಂದ ಕೇಳಿಬಂದಾಗ ಎನೇನೋ ಯೋಚನೆಗಳು ರಾಜಲಕ್ಷ್ಮಿ (ನನ್ನ ಪತ್ನಿ) ತಲೆಯಲ್ಲಿ ಮೂಡಿಬಂತಂತೆ. ಇದನ್ನು ಈಗಲೂ ಹೇಳಿಕೊಳ್ಳುತ್ತಿರುತ್ತಾಳೆ. ವಿಮಾನದಲ್ಲೇ ತಾನು ಕುಳಿತ್ಕೊಂಡಿದ್ದ ಆಸನದಲ್ಲೇ ತನ್ನ ಶಾಲು ಮರೆತು ಬಂದಿದ್ದರಿಂದ ಅದನ್ನು ಹಿಂದಿರುಗಿಸಲು ಆ ಪ್ರಸಾರವಾಯಿತೆಂದು ಹೇಳಿಕೊಂಡು ಆ ವಿಚಕ್ಷಣೆಯನ್ನು ಹೊಗಳುತ್ತಿರುತ್ತಾಳೆ.
ಅಂತಹದೇ ಒಂದು ಧನಿವರ್ಧಕದ ಪ್ರಸಾರ ನನ್ನನ್ನೂ ಈಚೆಗೆ ವಿಚಲಿತಗೊಳಿಸಿತ್ತು. ಧ್ವನಿವರ್ಧಕದಿಂದ .......ರವರಿಗೆ ಸ್ಮರಣ ಕಾಣಿಕೆ ........(ನನ್ನ ಹೆಸರು) ಕೊಡುತ್ತಾರೆ ಎಂದು ಕೇಳಿಬರುತ್ತದೆ. ನನಗೇ ಆಶ್ಚರ್ಯ. ಒಂದೆರಡು ಕ್ಷಣಗಳು ಕಳೆದರೂ ರಂಗಸ್ಥಳಕ್ಕೆ ಕೆಲಸ ನಿರ್ವಹಿಸಲು ಯಾರೂ ಬರದಿದ್ದರಿಂದ ..........ರವರು ಎಲ್ಲಿದ್ದರೂ ಬೇಗ ರಂಗಸ್ಥಳಕ್ಕೆ ಬಂದು ಸ್ಮರಣ ಕಾಣಿಕೆಯನ್ನು .........ರವರಿಗೆ ಅರ್ಪಿಸಬೇಕೆಂದು ಕೇಳಿಕೊಳ್ಳುತ್ತೇವೆ. ಇದು ನಡೆದದ್ದು ಸಂವಾದ(ಡಾಟ್)ಕಾಂ ಅವರು ನಡೆಸಿದ "ನಾನು ಮತ್ತು ನನ್ನ ಕನಸು" ಚಿತ್ರದ ಸಂವಾದ ಕಾರ್ಯಕ್ರಮದಲ್ಲಿ. ಸಂವಾದ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರು ತಮ್ಮ ಅನಿಸಿಕೆಗಳನ್ನು ಮುಂದಿಡುತ್ತಾರೆ ಚಿತ್ರನಿರ್ಮಾಕತಂಡದ ಸದಸ್ಯರು ಉತ್ತರ ಕೊಡುತ್ತಾರೆ. ಚಿತ್ರಗಳ ಬಗ್ಗೆ ಪ್ರೇಕ್ಷಕರ ಮತ್ತು ನಿರ್ಮಾಪಕ ತಂಡದವರ ನಡುವೆ ವಿಚಾರ ವಿನಿಮಯ, ಇದರಿಂದಾಗಿ ಪರಸ್ಪರ ಅರ್ಥಮಾಡಿಕೊಳ್ಳಲು ಅವಕಾಶ. ಕೊನೆಯಲ್ಲಿ ವಂದನಾರ್ಪಣೆ ಮತ್ತು ಅತಿಥಿಗಳಿಗೆ ಸ್ಮರಣ ಕಾಣಿಕೆ ಕೊಡುವುದು, ನಾನು ಸಂವಾದ(ಡಾಟ್)ಕಾಂ ನಲ್ಲಿ ಪ್ರಮುಖನೇನೂ ಅಲ್ಲ. ನನಗೆ ಈ ಕೆಲಸವಹಿಸುವರೆಂಬ ಸೂಚನೆ ಇರಲಿಲ್ಲ. ಇರಲಿ ಅಂತೂ ರಂಗಸ್ಥಳ ಹತ್ತಿ ಫೋಟೋ ಕ್ಲಿಕ್ಕಿಗೆ ಸಿಕ್ಕಿದ್ದೂ ಆಯಿತು. ಫೋಟೋಗಳು ಇಲ್ಲಿವೆ.
೧೫-೮-೫೦
9 years ago
No comments:
Post a Comment