Sunday, November 21, 2010

ಉಛ್ಛ ನೀಚ ಭಾವನೆ

ಚರ್ಚೆ ನಡೆದಿತ್ತು ಜೀವನ ಸಂಘರ್ಷದ ಪರಿ
ಎಲ್ಲವೂ ಕೆಟ್ಟಿದೆ ಉಛ್ಛ ನೀಚ ಭಾವನೆಗಳ ಅಡಿಗಲ್ಲ ಮೇಲೆ

ಕರಿ ಕಂದು ಹಳದಿ ಬಿಳಿ ಏನೇನೋ ಬಣ್ಣ
ಗಂಡು ಹೆಣ್ಣು ಹಳ್ಳಿಯವ ದಿಲ್ಲಿಯವ

ಬಿಳಿ ಶುಭ್ರ, ಸುಂದರ ಎಂದೊಬ್ಬರು ಅಂದರೆ
ಕರಿ ಶಕ್ತಿಶಾಲಿ ಎಂದರು ಇನ್ನೊಬ್ಬರು

ಹಳ್ಳಿಯವ ಪ್ರಾಮಾಣಿಕ ಮುಗ್ದ ಪರಿಶ್ರಮಿ
ದಿಲ್ಲಿಯವ ವಿಚಾರವಂತ ಬುದ್ಧಿವಂತ

ಹಳ್ಳಿಯವ ಹಠಮಾರಿ ಬದಲಾವಣೆಗಳ ವಿರೋಧಿ
ದಿಲ್ಲಿಯವ ಥಳ್ಕಿನ ಸೊಕ್ಕಿಗ ಬರೀ ಡೋಂಗಿ

ಹೆಣ್ಣು ಸಹನ ಮೂರ್ತಿ ಗಂಡು ಜಂಬಗಾರ
ಗಂಡು ಠೀವಿಯ ಪ್ರತೀಕ ಹೆಣ್ಣು ನಯವಿನಯ ಮೂರ್ತಿ

ಹೀಗೆ ನಡೆಯಿತು ಚರ್ಚೆ ಮುಗಿಯುವುದೇ ಅನ್ನಿಸಿತು
ಇದು ಮುಗಿಯುವುದೇ ಇಲ್ಲ ಎಂದೆಂದಿಗೂ

ತಾತ್ಕಾಲಿಕ ತೀರ್ಮಾನವಾಯಿತು ಬಿಳಿಯ ಗಂಡು ಉಛ್ಛ
ನಾನು ಹಿಗ್ಗಿದೆ ನಾನು ಗಂಡು ನನ್ನ ತಲೆ ಕೂದಲು ಬಿಳಿ

No comments: