ನನಗೆ ರೈಲ್ ಅಂದರೆ ಇಷ್ಟ. ನಮ್ಮ ತಂದೆಗೆ ಮಾಗಡಿಯಿಂದ ಗೌರಿಬಿದನೂರಿಗೆ ವರ್ಗವಾದಾಗ ಸಂಸಾರ ಅಲ್ಲಿಗೆ ಹೋಯಿತು. ಮಾಗಡಿಗೆ ರೈಲು ಸಂಪರ್ಕ ಇಲ್ಲ; ಗೌರಿಬಿದನೂರಿಗೆ ಇದೆ.(ಬಸ್ ರೈಲ್ ಮಿಶ್ರ ಪ್ರಯಾಣ ಕಷ್ಟವೆಂದು ಬೆಂಗಳೂರಿನಿಂದ ಗೌರಿಬಿದನೂರಿಗೆ ಹೋಗುವಾಗ ರೈಲಿನಲ್ಲಿ ಹೋಗಲಿಲ್ಲ). ಗೌರಿಬಿದನೂರು ತಲುಪಿದ ಕ್ಷಣದಿಂದ ರೈಲನ್ನು ನೋಡುವ ಆಸೆ. ನಮ್ಮ ಮನೆಯಿಂದ ರೈಲು ನಿಲ್ದಾಣ ಹತ್ತಿರವಿತ್ತು. ಬೆಳೆಗ್ಗೆ ಎದ್ದು ರೈಲು ಕೂಗನ್ನೇ ಕಾಯುತ್ತಿದ್ದೆ. ಅದು ಕೇಳಿದ ತಕ್ಷಣ ನಿಲ್ದಾಣಕ್ಕೆ ನೋಡಲು ಓಡಿದೆ. ಆಗ ಅದೇನೋ ಆನಂದ.
ಓದು ಮುಗಿದ ಮೇಲೆ ಕೆಲಸ ಮಾಡುವ ಜಾಗ ಗುಜರಾತಿನ ಜುನಗಡದಿಂದ ಬೆಂಗಳೂರಿಗೆ ಬರಲು ವೀರಂಗಾಮ್, ಮುಂಬೈ, ಗುಂತಕಲ್ಲಲ್ಲಿ ರೈಲು ಬದಲಾಯಿಸುತ್ತಿದ್ದ ಕಾಲಕ್ಕೆ ಹೋಲಿಸಿದರೆ ಈಗ ಒಂದೇ ಗೇಜ್‍ನ ಹಳಿ ಇರುವುದರಿಂದ ದೂರದ ಊರುಗಳಿಗೂ ಸಂಪರ್ಕ ಸಿಕ್ಕಿದೆ.
ನೌಕರಿಗೆ ಮುಂಬಯಿಯಲ್ಲಿಯೂ ಹೈದರಾಬಾದಿನಲ್ಲಿಯೂ ಕೆಲದಿವಸ ಇದ್ದಾಗ ಅಲ್ಲಿನ ಲೋಕಲ್ ಮಾರ್ಗಗಳ ಅನುಭವ ಏನೆಂದರೆ ನೂಕು ನುಗ್ಗಲಿನ ಪ್ರಯಾಣವೆಂಬ ದೂರು ಹೊರಗೆ ಮಾಡಿದರೂ, ಕಡಿಮೆ ಖರ್ಚು ಎನ್ನುವ ಒಳಒಳಗಿನ ಖುಷಿ. ಈಗ ನಾವಿರುವ ಬೆಂಗಳುರಿಗೂ ಲೋಕಲ್ ಮಾರ್ಗಗಳು ಬಂದರೂ ಅವು ಹೊಸ ತರಹದ ಮೆಟ್ರೋ.
ಇನ್ನೂ ಪ್ರರಂಭವಾಗಲು ಕೆಲು ತಿಂಗಳುಗಳು ಬೇಕಾಗಬಹುದು. ಇರಲಿ, ಏನೀಗ. ನಮ್ಮೂರಲ್ಲೂ ಮೆಟ್ರೋ ಇದೆ ಅನ್ನುವ ಹೆಮ್ಮೆ.
ಇಲ್ಲಿ ಆಗುತ್ತಿರುವ ಬದಲಾವಣೆ ಪ್ರಗತಿ ಪ್ರಪಂಚದ ದರ್ಜೆ (world class) ಅನ್ನಿಸುತ್ತದೆ. ಏಕೆಂದರೆ ನಾನು ನ್ಯೂಯಾರ್ಕಿನ ಮೆಟ್ರೋದಲ್ಲೂ ಪ್ರಯಾಣ ಮಾಡಿದ್ದೇನೆ. ಅಲ್ಲಿನ ಮಾಲ್ ಗಳನ್ನು ನೋಡಿದ್ದೇನೆ.
೧೫-೮-೫೦
9 years ago
No comments:
Post a Comment