Thursday, July 25, 2013

ಅಳಿಸಿಹೋದ ಕೆಲವು ಹಳೆಯ ಪದ್ಧತಿಗಳು

                                                                   ಕೆಲವು ಹಳೆಯ ಪದ್ಧತಿಗಳು

೧. ಎಣ್ಣೆಯನ್ನು ತುಂಬಿದ ಇನ್ಸುಲೇಟರುಗಳು
                     
ಸಮುದ್ರ ತೀರದಲ್ಲಿ ಗಾಳಿಯಲ್ಲಿ ತೇವ ಮತ್ತು ಉಪ್ಪಿನ ಅಂಶ ಹೆಚ್ಚಾಗಿರುವುದರಿಂದ ಟೆಲೆಗ್ರಾಫ್ ತಂತಿಗಳಿಂದ ವಿದ್ಯುತ್ ಭೂಮಿಗೆ ಸೋರುವುದನ್ನು ಕಡಿಮೆ ಮಾಡಲು ಇನ್ಸುಲೇಟರುಗಳ ಒಳಗೆ ಎಣ್ಣೆಯನ್ನು ತುಂಬುತ್ತಿದ್ದರು. ಇದು ವಿದ್ಯುತ್ ಭೂಮಿಗೆ
ಸೋರುವುದನ್ನು ಸರ್ವತ್ರ ತಡೆಯುವುದೆಂದು ತಿಳಿಯಬಾರದು. ಎಣ್ಣೆಯ ಮೇಲ್ಭಾಗದಲ್ಲೂ ಉಪ್ಪು ಪದರ ಕ್ರಮೇಣ ಹರಡಿ ಇನ್ಸುಲೇಟರುಗಳ ಕಾರ್ಯಕ್ಷಮತೆ ತಗ್ಗುತ್ತಿತ್ತು. ಅದಕ್ಕಾಗಿ ೩ ವರ್ಷಗಳಿಗೊಮ್ಮೆ ಆ ಎಣ್ಣೆಯನ್ನು ನವೀಕರಿಸಲಾಗುತ್ತಿತ್ತು

೨.ನಾಲ್ಕು ತಂತಿಯ ತಂತಿಯಿಂದ ಮೂರು ಟೆಲಿಫೋನ್ ಸಂಪರ್ಕ



ನಾಲ್ಕು ತಂತಿಯ ತಂತಿಯಿಂದ ಎರಡು ಟೆಲಿಫೋನ್ ಸಂಪರ್ಕ ತಯಾರು ಆಗುವುದು ಸಹಜ. ಮೂರನೆಯದು 'ಫ್ಯಾಂಟಮ್'  ಅದು ಸಮತೋಲನವುಳ್ಳ ಟ್ರಾನ್ಸಫಾರ್ಮರ್‌ಗಳನ್ನು
ಉಪಯೋಗಿಸಿ ಪಡೆಯುವಂಥದ್ದು. ಈಗಿನ ಸಜೀವ ಕ್ಯಾರಿಯರ್ ವ್ಯವಸ್ಥೆಯ ಜಡ ರೂಪ.

೩.ಆಗಾಗಲೇ ಇದ್ದ ಲೈನ್‌ಗಳನ್ನು ಉಪಯೋಗಿಸಿಕೊಂಡು ಹೆಚ್ಚು ಚಾನೆಲ್‌ಗಳನ್ನು ಹರಿಸಲು ಮಾಡಿಕೊಂಡ ಉಪಾಯ



ಕ್ರಾಸ್‌ಟಾಕ್ ಅಂದರೆ ಒಂದು ಚಾನೆಲ್‌ನಿಂದ ಇನ್ನೊಂದು ಚಾನೆಲ್‌ಗೆ ಸೋರುವ ವಿದ್ಯುತ್‌ನಿಂದ ಉಂಟಾಗುವ ತೊಂದರೆ..
ಇದನ್ನು ತಪ್ಪಿಸಲು ಇದ್ದ ವ್ಯವಸ್ಥೆಯೆಂದರೆ ಒಂದು ತಂತಿ ಜೋಡಿಯ ಮಧ್ಯೆ ಅಂತರ ಕಡಿಮೆ ಮಾಡುವುದು; ಒಂದು ಜೋಡಿಯ ಒಂದೊಂದು ತಂತಿಯನ್ನು ಬಹಳ ದೂರ ಸಮಾನಾತರವಾಗಿರದಂತೆ ನೋಡಿಕೊಳ್ಳುವುದು ಮತ್ತು ಒಂದು ಜೋಡಿಯಿಂದ ಇನ್ನೊಂದು ಜೋಡಿಗೆ ದೂರ ಹೆಚ್ಚಿಸುವುದು. ಒಂದು ಟೆಲಿಫೋನ್‌ ಜೋಡಿ ತಂತಿಯಿಂದ ಸಮೀಪದಲ್ಲಿರುವ ಟೆಲಿಫೋನ್‌ ಜೋಡಿಗಳಿಗೆ ಕ್ರಾಸ್‌ಟಾಕ್ ತಪ್ಪಿಸಲು ಇದ್ದ ವ್ಯವಸ್ಥೆಯು ಉತ್ತಮಪಡಿಸಲು ಹೆಚ್ಚಿನ ಚಾನೆಲ್‌ಗಳನ್ನು ಹೊತ್ತಿರುವ ಜೋಡಿ ತಂತಿಗಳ ಮಧ್ಯೆ ಅಂತರ ಕಡಿಮೆ ಮಾಡುವುದು ಮತ್ತು  ಕಡಿಮೆ ಚಾನೆಲ್‌ಗಳನ್ನು ಹೊತ್ತಿರುವ ಜೋಡಿಯಿಂದ ದೂರವಿರಿಸುವುದು  

ಮುಂದುವರೆಯುವುದು

No comments: