Tuesday, April 15, 2008

ಅತಿ ವಿರಳ

ನಮ್ಮ ಹತ್ತಿರದವರು ಸಾವಿಗೀಡಾದರೆ, ಅದು ದುರ್ಮರಣವಲ್ಲದಿದ್ದರೂ, ನಾವು ಎಲ್ಲರನ್ನೂ- ದೇವರನ್ನೂ- ಬಯ್ಯುತ್ತೇವೆ. ಡಾಕ್ಟರ್ ಸರಿಯಾಗಿ ಚಿಕಿತ್ಸೆ ಮಾಡಲಿಲ್ಲ. ನರ್ಸ್ ಸರಿಯಾಗಿ ಉಪಚಾರ ಮಾಡಲಿಲ್ಲ, ಕೊನೆಗೆ ನಮ್ಮನ್ನು ನಾವೇ ಅಂದುಕೊಳ್ಳುತ್ತೇವೆ-ನಮ್ಮಿಂದ ಏನೋ ಕಡಿಮೆ ಆಯಿತೆಂದು. ನಮ್ಮ ಹತ್ತಿರದವರು ಕೊಲೆಯಾದರೆ, ಹಗೆ ಭುಗ್ಗೆನ್ನುತ್ತದೆ. ಕೊಲೆಗಡಕನಿಗೆ ಶಿಕ್ಷೆ ಗರಿಷ್ಟವಾಗಬೇಕೆಂದು ಹಾತೊರೆಯುತ್ತೇವೆ. ಇದೆಲ್ಲ ಮನವನ ಸಹಜ ಗುಣ.

ಪ್ರಿಯಂಕ ತನ್ನ ತಂದೆ(ರಾಜೀವ್ ಗಾಂಧಿ)ಯ ಕೊಲೆಯ ಸಂಚುಗಾರರಲ್ಲಿ ಒಬ್ಬಳಾದ ನಳಿನಿಯನ್ನು ಈಚೆಗೆ ಕಾರಾಗೃಹದಲ್ಲಿ ಭೇಟಿಮಾಡಿ ಕೊಲೆಯ ಕಾರಣವನ್ನು ತಿಳಿಯಲು ಪ್ರಯತ್ನಿಸಿದ್ದು ಈಗಿನ ತಾಜಾ ಸುದ್ದಿ. ಇರಲಿ, ಇದು ಪ್ರಚಾರಕ್ಕಾಗಿ ಮಾಡಿದ್ದಿರಬಹುದೇನೋ ಎಂದರೆ, ಇದನ್ನು ಗುಪ್ತವಾಗಿಡಲಾಗಿತ್ತು. ಆದ್ದರಿಂದ ಇದನ್ನು ಪ್ರಚಾರಕ್ಕಾಗಿ ಮಾಡಲಿಲ್ಲ ಅನ್ನೋಣ. ಈ ಸುದ್ದಿ ಹೊರಬಿದ್ದ ಮೇಲೆ ಪ್ರಿಯಂಕ ಇದನ್ನು ಖಾಸಗಿ ವಿಷಯ ಎಂದಿದ್ದಾಳೆ. ರಾಹುಲ್ ಹೇಳಿದ್ದೇನು : ನಮ್ಮ ಕುಟುಂಬ ಹಗೆಯನ್ನು ಮುಂದುವರೆಸುವುದಿಲ್ಲ. ಆತನ ಹೇಳಿಕೆಯ ಸುದ್ದಿ ಇಲ್ಲಿ ಓದಿ

ಈ ತರಹ ವಿಚಾರ ಅತಿ ವಿರಳ

No comments: