Wednesday, May 14, 2008

ಹೂವಿನ ಮಳೆ--ಕಲ್ಲಿನಮಳೆ

ಕವಿಯ ತಲೆಯಲ್ಲಿ ಗುಂಗು -- ದೇಶ ಪ್ರೇಮಿ

ನಾನು ಮಾಧ್ಯಮ ಶಾಲೆಯಲ್ಲಿದ್ದಿದ್ದಾಗ ನಾನು ಓದಿದ್ದ ಇಂಗ್ಲೀಷ್ ಪದ್ಯವೊಂದು ಜ್ಞಾಪಕಕ್ಕೆ ಬಂತು. ಅದು ರಾಬಟ್ ಬೌನಿಂಗ್ ಅವರ The Patriot ಎಂಬುದು. ಅದು ಒಬ್ಬ ನಾಯಕನ ಕಥೆ. ಅದು ಆ ನಾಯಕನಿಗೆ ಅವನ ದೇಶ ಸೇವೆಗೆ ಸಿಕ್ಕ ವರ ಮತ್ತು ಶಾಪ, ಅದೂ ಒಂದು ವರ್ಷದೊಳಗೆ. ಆ ನಾಯಕನಿಗೆ ಮೆರವಣಿಗೆ ಮಾಡಿ ಹೂವಿನ ಮಳೆ ಕರೆದ ಕೆಲವೇ ದಿನಗಳಲ್ಲಿ ಕಲ್ಲಿನ ಮಳೆ ಎದುರಿಸಬೇಕಾಯಿತು. ಅದು ಅವನ ದುಷ್ಕರ್ಮಗಳಿಗಾಗಿ ಎಂದು ಆ ನಾಯಕನೇ ಹೇಳಿಕೊಂಡಿದ್ದಾನೆ. ನಾನು ಎಣಿಕೆ ಮಾಡಹೊರಟಿದ್ದು ಏತಕ್ಕೆ ಈ ತಿರುವುಮುರುವಾಯಿಂದು ಅಲ್ಲ. ಆಯಿತಲ್ಲ ಎಂದು. ಅಂದರೆ ಪ್ರಜೆಗಳು ಅತಿ ಬೇಗ ಪ್ರತಿಕ್ರಿಯಸುತ್ತಾರೆ ಎನ್ನುವುದು ಮೊದಲಿನಿಂದ ನಡೆದು ಬಂದಿದೆ.

ಇರಲಿ ಇನ್ನೊಂದು ಮುಖ ನೋಡಿ

ನಾನು ಇತ್ತೀಚೆಗೆ ಓದಿದ ಒಂದು ಪುಸ್ತಕ ಅಂದರೆ ದೀಪಕ್ ಚೋಪ್ರ ಅವರ "How to know God". ಅದರಲ್ಲಿ ಅವರು ದೈವದ ಕೈವಾಡವನ್ನು ವಿವರಿಸುವ ಒಂದು ಸತ್ಯ ಕಥೆ ಅವರು ಹೇಳುತ್ತಾರೆ.

ಸತ್ಯ ಕಥೆ.

ಜಪಾನೀಯರಿಗೆ ಸೆರೆಸಿಕ್ಕ ಸೈನಿಕರ ಬರ್ಮದ ಕ್ಯಾಂಪೊಂದರಲ್ಲಿ ಇದ್ದ ಇವರು ಅಲ್ಲಿನ ಧಾರಾಕಾರವಾದ ಮಳೆ, ಜಪಾನೀಯರ ದರ್ಪದ ಹಿಂಸೆಗಳಿಗೆ ಒಳಪಟ್ಟು ಹತಾಶರಾಗಿದ್ದರು. ಯುದ್ಧ ಕೊನೆಯ ಹಂತಕ್ಕೆ ತಲುಪಿ, ಕ್ಯಾಂಪುಗಳನ್ನು ಕ್ರೋಢೀಕರಿಸಲು ಜಪಾನೀಯರು ತೀರ್ಮಾನಿಸಿದ್ದ ಹಂತದಲ್ಲಿ ಇವರಿದ್ದ ಕ್ಯಾಂಪಿನಲ್ಲಿ ಅವರು ಖೈದಿಗಳನ್ನು ಬೇರೆಡೆಗೆ ಸಾಗಿಸುವರೆಂದುಕೊಂಡಿದ್ದಾಗ ಅವರು ಖೈದಿಗಳನ್ನು ಸಾಲಾಗಿ ನಿಲ್ಲಿಸಿ ಹತ್ತಿರದ ಗುರಿಯಿಂದ ಗುಂಡಿಕ್ಕಿ ಕೊಂದರು. ಸೆನ್‍ಗುಪ್ತನನ್ನೂ ಪಿಸ್ತೂಲಿನ ಗುಂಡಿನಿಂದ ಹೊಡೆಯಲಾಯಿತು. ಅವರು ಗುಂಡಿನ ಶಬ್ದ ಕೇಳಿದರು ಅತೀವ ವೇದನೆಯಿಂದ ಕೆಳಕ್ಕೆ ಉರುಳಿದರು. ಸೆನ್‍ಗುಪ್ತರಿಗೆ ಹಸಿವೆ ವೇದನೆಗಳಿಗಿಂತ ಸಾವು ಉತ್ತಮವೆನಿಸಿತು. (ಜಪಾನೀಯರು ಈ ತೀರ್ಮಾನವನ್ನು ಏಕೆ ತೆಗೆದುಕೊಂಡರೆಂಬುದು ನಿಘೂಡವಾಗಿತ್ತು. ಬ್ರಿಟಿಷರು ಮುನ್ನುಗ್ಗಿರಬಹುದು ಅಥವಾ ಜಪಾನೀಯರೇ ಹಿನ್ನಡೆದಿರಬಹುದು.) ಆದರೇ ಅದೇ ಕೊನೆಯಾಗಿರಲಿಲ್ಲ. ಒಂದು ಅದ್ಭುತವೆಂದರೆ ಬಹಳ ಹೊತ್ತಿನ ನಂತರ ಅವರಿಗೆ ಙ್ಞಾನ ಬಂದಾಗ ಜಪಾನೀಯ ಸೈನ್ಯ (ಎಲ್ಲರೂ ಸತ್ತಿದ್ದಾರೆಂದು ತಿಳಿದು) ಅಲ್ಲಿಂದ ತೆರಳಿದ್ದಾರೆಂಬುದು ಮತ್ತು ತಾವು ಹೆಣಗಳ ರಾಶಿಯಲ್ಲಿ ಬಿದ್ದಿರುವುದು ಅರಿವಾಯಿತು. ಆ ರಾಶಿಯಿಂದ ತೆವಳಿಕೊಂಡು ಹೊರಬಂದು ಭಯ ಅಸಹ್ಯಭಾವನೆಗಳಿಂದ ಸತ್ತೆನೋ ಬದುಕಿದೆನೊ ಎಂದುಕೊಂಡು ಎಲ್ಲಾ ಶಕ್ತಿಗಳನ್ನೂ ಕ್ರೋಢೀಕರಿಸಿ ರಾತ್ರೆಯೆಲ್ಲಾ ಯೊಚಿಸಿ ಅಲ್ಲಿಂದ ಅಪಾಯವಿಲ್ಲದ ಕಡೆಗೆ ತಪ್ಪಿಸಿ ಕೊಳ್ಳಲು ನಿರ್ಧರಿಸಿದರು. ಕಾಡು ಮೇಡು, ದುಷ್ಟಜಂತುಗಳು, ಹಾವುಗಳು ಧಾರಾಕಾರ ಮಳೆ, ಅಲ್ಲಿ ಇಲ್ಲಿ ಇದ್ದ ಸಣ್ಣ ಹಳ್ಳಿಗರಲ್ಲಿ ಅಪನಂಬಿಕೆ, ಇಷ್ಟೆಲ್ಲ ಪ್ರತಿಕೂಲ ಸನ್ನಿವೇಶದಲ್ಲಿ ತಲೆಮರೆಸಿ ಕಲುನಡಿಗೆಯಲ್ಲೇ ತಿಂಗಳಾನುಗಳ್ಲೆ ಪಯಣಿಸಿ ಇಂಡಿಯಾ ಸೇರಿ ಮುಂದಕ್ಕೆ ಕೊಲ್ಕತ್ತಾ ತಲುಪಿದರು. ಸೈನ್ಯದ ಮುಖ್ಯ ಸ್ಥಾನಕ್ಕೆ ಎಲ್ಲವನ್ನು ವರದಿ ಒಪ್ಪಿಸಿದರು. ಅಮೇಲೆ ಆದದ್ದೇನು? ಇವರನ್ನು ಸೈನ್ಯದ ಮುಖ್ಯಸ್ತರು ನಂಬದೆ ಜಪಾನಿನ ಗೂಢಚಾರನಿರಬೇಕೆಂದು ಬಂಧಿಸಿದರು. ಬಂಧನ್ನೊಳಗಾದ ಮೇಲೆ ತನಿಖೆಯ ಅಂಗವಾಗಿ ದಿನಂಪ್ರತಿ ಪ್ರಶ್ನೆ, ವಿಚಾರಣೆ, ಹಿಂಸೆ ಮತ್ತು court marshal ಪ್ರಕರಣಗಳಿಂದಾಗಿ ಅವರ ಎಲ್ಲಾ ಚೇತನವೂ ಉಡುಗಿಹೋಗಿ ಆದದ್ದು ಆಗಲಿ ಎಂದುಕೊಂಡು ಹೋರಾಡುವುದನ್ನು ತ್ಯಜಿಸಿದರು. ಕೊನೆಗೆ ಸೈನ್ಯದ ಅಧಿಕಾರಿಗಳು ಇವರನ್ನು ನಂಬಲು ಪ್ರಾರಂಭಿಸಿ ಬಿಡುಗಡೆಮಾಡಿದರು. ಇಷ್ಟೆಅಲ್ಲದೆ ಅವರ ಸಾಹಸಕ್ಕೆ ಪದಕಪ್ರದಾನ ಮಾಡಿ ಅವರನ್ನು ಕೊಲಕತ್ತಾ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಆದರೆ ಅವರಿಗೆ ಈ ಹೊತ್ತಿಗೆ ಇದಾವುದೂ ಬೇಕಾಗಿರಲಿಲ್ಲ. ಅವರು ಅಸ್ಸಾಂನ ಊರೊಂದರಲ್ಲಿ ಸನ್ಯಾಸಿಯಂತೆ ಮರದೆಡೆ ಉಳಿದ ಜೀವನವನ್ನು ಸವೆಸಿದರು. ನೋಡಿದವರಿಗೆ ಅವರು ಭಿಕ್ಷುಕರಂತೆ ಕಾಣುತ್ತಿದ್ದರು.

ಈ ಕಥೆಯಲ್ಲಿ ಸೆನ್‍ಗುಪರು ಹಣೆಗೆ ಗುಂಡಿಕ್ಕಿದರು ಏಕೆ ಸಾಯಲಿಲ್ಲ ಎಂಬುದನ್ನು ದೇವರ ಕೈವಾಡವೆಂದು ತಿಳಿಯಬೇಕೆಂಬುದು ದೀಪಕ್ ಚೊಪ್ರ ಅವರ ಅನಿಸಿಕೆ.

ಇದು ರಾಬಟ್ ಬೌನಿಂಗ್ ಅವರ The Patriot ನಂತೆಯೇ ನಾಯಕನಿಗೆ ವರ ಶಾಪಗಳು; ಕ್ರಮ ತಿರುವು ಮುರುವು ಅಷ್ಟೆ. ಆ ನಾಯಕನಿಗೆ ಮೊದಲು ವರ ಆಮೇಲೆ ಶಾಪ; ಈ ಸೆನ್‍ಗುಪ್ತರಿಗೆ ಮೊದಲು ಶಾಪ ಆಮೇಲೆ ಶಾಪವಿಮುಕ್ತನಾಗಿ ವರ. ಅದು ಅವರಿಗೇನು ಉಪಯೋಗವಾಗಲಿಲ್ಲ ಎನ್ನುವುದು ಬೇರೆ ವಿಷಯ.

No comments: