Friday, May 9, 2008

ಸಾವಿಲ್ಲ ಈ ರೋಬೋಟ್‍ಗೆ

ಪುರಾಣಗಳ ಕಾಲದಲ್ಲಿ ದೇವರಿಂದ ವರ ಪಡೆಯುತ್ತಿದ್ದ ಶೈಲಿ ಅಂದರೆ -- ನನಗೆ ಯಾರಿಂದಲೂ ಯಾವಾಗಲೂ (ಹೇಗೂ ... ಇತ್ಯಾದಿ) ಸಾವು ಬರಬಾರದು-- ಎಂದು. ದೇವರೂ ವರ ಕೊಟ್ಟು ಬಿಡುತ್ತಿದ್ದ. ಅವನಿಗೆ ಬೇರೆ ದಾರಿ ಇರುತ್ತಿರಲಿಲ್ಲ. ಆ ವರ ದಾನ ದಿಂದ ಆಗುವ ಅನಾಹುತವನ್ನು ಮತ್ತೆ ಯಾರಾದರೂ ವಿವರಿಸಿದಾಗ ಕೈ ಕೈ ಹಿಸುಕಿ ಕೊಳ್ಳುತ್ತಿದ್ದ. ದುಷ್ಪರಿಣಾಮವನ್ನು ತಡೆಗಟ್ಟಲು ಏನಾದರೊಂದು ಉಪಾಯ ಹುಡುಕುಬೇಕಾಗಿ ಬಂದುಬಿಡುತ್ತಿತ್ತು. ಆ ಉಪಾಯಗಳ ಸಿದ್ಧಿಗಳು ಮತ್ತೊಂದು ಕಥೆಯ ಬೀಜವಾಗುತ್ತಿತ್ತು. ಮೋಹಿನಿ - ಭಸ್ಮಾಸುರ, ಮಹಿಷಾಸುರ - ಚಾಮುಂಡಿ, ಮೂಷಿಕರಾಜ - ಗಣೇಶ; ಇವಲ್ಲದೆ ಎಷ್ಟೋ ಉದಾಹರಣೆಗಳಿವೆ. ಒಂದು ಸರ್ವಕಾಲಿಕ ಸತ್ಯ ಎನ್ನುವಂತೆ ಹುಟ್ಟಿದ್ದು ಸಾಯಲೇಬೇಕು ಎಂಬ ಸತ್ಯಕ್ಕೆ ಇಲ್ಲಿಯ ವರೆಗೂ ಅಡ್ಡಿಯಾಗಿಲ್ಲ.

ಈಗ ವೈಙ್ಞಾನಿಕ ಯುಗದಲ್ಲಿ ನಿರ್ಮಿಸಿರುವ ಜೀವವಿರದ ರೋಬೋಟ್‍ಗಳಲ್ಲಿ ಒಂದು, ಅದರ ಭಾಗಗಳನ್ನು ಬೇರ್ಪಡಿಸಿದರೂ ಮತ್ತೆ ಕೂಡಿಕೊಂಡು ಮತ್ತೆ ಕೆಲಸಕ್ಕೆ ತೊಡಗುವುದನ್ನು ನೋಡಿದರೆ ಜರಾಸಂಧನ ಜ್ಙಾಪಕ ಬರುತ್ತದಲ್ಲವೆ. ಮತ್ತು ಮನುಷ್ಯನಿಗೂ ಪ್ರಾಣಿಗಳಿಗೂ ಮುಂದೆ ಸಾವಿಲ್ಲದಂತೆ ಮಾಡಲು ಸಾಧ್ಯವೇನೋ ಎಂಬ ಅನುಮಾನ ಬರಲು ಸಾಧ್ಯವಲ್ಲವೇ?

ಆ ವಿಡಿಯೋ ಇಲ್ಲಿ ನೋಡಿ

No comments: