ಇದು http://www.chilume.com/2011/05/kannada-poem-yeradu-mukha-by-mns-rao.html ಅಲ್ಲಿ ಪ್ರಕಟವಾಗಿದೆ.
ಎರಡು ಮುಖ
- ಎಂ.ಎನ್.ಎಸ್. ರಾವ್
ಏನು ಮಾಡೋದು ಯಾವಾಗಲೂ ಎಲ್ಲಾದಕ್ಕೂ ಎರೆಡೆರಡು ಮುಖ
ಮನುಷ್ಯನಿಗೆ ಹೆಚ್ಚು ಆಸೆ ಯಾವುದು ಕೆಟ್ಟದ್ದೋ ಅದರ ಮೇಲೆ
ಯಾರಿಗೆ ಗೊತ್ತಿಲ್ಲ ತಂಬಾಕು ದೇಹಕ್ಕೆ ಘೋರ ಘೋರ
ಸಿಗರೇಟು ಸೇದಲು ಮನೇಲಿ ಹೆಂಡತಿ ಅಡ್ಡಿ ಬೀದೀಲಿ ಕಾನೂನು ಅಡ್ಡಿ
ಆದರೂ ಅದನ್ನು ಬಿಟ್ಟು ಬದುಕೋದು ಅವರಿಗೆ ಹೇಗೆಂದು ಗೊತ್ತಿಲ್ಲ
ರೈತರಿಗೆ ತಂಬಾಕೇ ಬೆಳೀಬೇಡಿ ಅಂದ್ರೆ ಅವರು ದುಡ್ಡು ಮಾಡೋದು ಬೇಡವೇ
ತಂಬಾಕೇ ಬೆಳೀದ್ರಿದ್ರೆ ಸರ್ಕಾರ ಸುಂಕ ಹಾಕದೇ ದೇಶ ಅಭಿವೃದ್ಧಿ ಹೇಗೇ
ಬೆದುರು ಬೊಂಬೆ ಚಿತ್ರ ಸಿಗರೇಟು ಪ್ಯಾಕ್ ಮೇಲೆ ಮುದ್ರಿಸಿದರೆ ಸಾಕೇ
ಸುಂಕ ಹಾಕಲು ಬೇರೇನು ಇಲ್ಲವೆ ತಂಬಾಕು ಬೆಳೆ ನಿಲ್ಲಿಸೋದು ಹೇಗೇ
೧೫-೮-೫೦
9 years ago
No comments:
Post a Comment